ಮಂಡ್ಯ : ಮಂಡ್ಯ ವಿವಿ ಗೊಂದಲಕ್ಕೆ ಶಾಸಕ ಗಣಿಗ ರವಿಕುಮಾರ್ ತೆರೆ ಎಳೆದಿದ್ದಾರೆ. ವಿಶ್ವವಿದ್ಯಾನಿಲಯದ ಮುಖ್ಯದ್ವಾರದ ಕಾಮಗಾರಿ ಶಂಕುಸ್ಥಾಪನೆ ನೆರೆವೇರಿದೆ. ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ವಿವಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಸರ್ಕಾರ ಮಂಡ್ಯ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ವಿಲೀನಕ್ಕೆ ಮುಂದಾಗಿತ್ತು ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ವಿವಿಯ ನೂತನ ಮುಖ್ಯ ದ್ವಾರ ಹಾಗೂ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. 3 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ.
ಇನ್ನೂ ಕಾಲೇಜಿಗೆ ಆಗಮಿಸಿದ ಶಾಸಕ ಗಣಿಗ ರವಿಕುಮಾರ್ ಗೆ ವಿದ್ಯಾರ್ಥಿಗಳು ಅದ್ದೂರಿ ಸ್ವಾಗತ ಕೋರಿದರು. ಶಾಸಕ ಗಣಿಗ ರವಿಕುಮಾರ್ ಗೆ , ಪರಿಷತ್ತ್ ಸದಸ್ಯ ವಿವೇಕಾನಂದ, ಕುಲಪತಿ ಶಿವಚಿತ್ತಪ್ಪ ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, ಮಂಡ್ಯ ವಿವಿಯ ಮುಖ್ಯ ದ್ವಾರ ಹಾಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ. ಮಂಡ್ಯ ವಿವಿ ಮುಚ್ಚೊಯ್ತು ಅನ್ನೋರಿಗೆ ಇದೇ ಉತ್ತರ. ನಾವು ವಿವಿ ಮುಚ್ಚಲ್ಲ, ನಮ್ಮ ಜಿಲ್ಲೆಯ ಯುವಕರಿಗೆ ಮಂಡ್ಯ ವಿವಿ ಇದ್ದೆ ಇರುತ್ತೆ. ಯಾವುದೇ ಕಾರಣಕ್ಕೂ ಮಂಡ್ಯ ವಿವಿ ಮುಚ್ಚುವ ಪ್ರಶ್ನೇ ಇಲ್ಲ. ಮಂಡ್ಯ ವಿವಿ ಆವರಣದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳ ಸೇರಿಸಿ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡ್ತೇವೆ ಎನ್ನುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.