ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದ್ದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ಸಂಸದ ಪಿ.ಸಿ. ಮೋಹನ್ ನಡುವೆ ಮಾತಿನ ಚಕಮಕಿ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್ ಪ್ರತಿಕ್ರಿಯೆ ನೀಡಿದ್ದಾರೆ.
ಮಸ್ಕ್ ಮಿಲನ್ʼನಿಂದ ಸೂಪರ್ ಪ್ರಯೋಜನಗಳು..! ಪ್ರತಿದಿನ ಸೇವಿಸಿದ್ರೆ ಈ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ
ಕಾಂಗ್ರೆಸ್ನಿಂದ ಬಲಿಜ ಸಮುದಾಯಕ್ಕೆ ಅನ್ಯಾಯವಾಗಿದೆ. ಪ್ರಚಾರದ ಗೀಳಿಗೆ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ. ಪ್ರದೀಪ್ ಅವರಿಗೆ ಹತಾಶೆಯಾಗಿದ್ದು, ಅವರ ಹತಾಶೆಯನ್ನು ನಿನ್ನೆ ಹೊರಗೆ ಹಾಕಿದ್ದಾರೆ ಎಂದರು.
ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆದಾಗ ಕೈವಾರ ತಾತಯ್ಯ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದರು. ಪ್ರದೀಪ್ ಈಶ್ವರ್ ಬಿಜೆಪಿ ಬಗ್ಗೆ ಮಾತಾಡೋದು, ಸಿದ್ದರಾಮಯ್ಯ ಸರ್ಕಾರ ಅದು ಇದು ಅಂತ ಮಾತಾಡೋಕೆ ಪ್ರಾರಂಭ ಮಾಡಿದರು. ಆಗ ಜನರೇ ಅವರ ವಿರುದ್ದ ಮಾತನಾಡಲು ಶುರು ಮಾಡಿದರು. ಪ್ರದೀಪ್ ಲಕ್ಷ್ಮಣ ರೇಖೆ ದಾಟಿದ ಮೇಲೆ ನಾನು ಮಧ್ಯ ಪ್ರವೇಶ ಮಾಡಿದೆ ಎಂದು ಸ್ಪಷ್ಟನೆ ನೀಡಿದರು.