ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿ ನಟಿಸುತ್ತಿರುವುದು ಗೊತ್ತೇ ಇದೆ. ಯುಐ ಸಿನಿಮಾ ಬಳಿಕ ಬುದ್ದಿವಂತನ ಹೊಸ ದಾಳ ಏನ್ ಇರಬಹುದು ಎಂಬ ಕುತೂಹಲಕ್ಕೀಗ ತೆರೆಬಿದ್ದಿದೆ. ತಲೈವರ್ ಕೂಲಿ ಅಖಾಡದಲ್ಲೀಗ ಉಪ್ಪಿ ಪ್ರತ್ಯಕ್ಷರಾಗಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಚರ್ಚೆಯಲ್ಲಿ ಉಪ್ಪಿ ಭಾಗಿಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಉಪ್ಪಿ ಕೂಲಿ ಸಿನಿಮಾದಲ್ಲಿ ಕಾಲೀಶ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ರಗಡ್ ಗೆಟಪ್ ನಲ್ಲಿ ಬುದ್ದಿವಂತ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಈಗಾಗಲೇ ಚಿತ್ರತಂಡ ರಿಲೀಸ್ ಮಾಡಿತ್ತು. ಇನ್ನು, ಕೂಲಿ ಅಂಗಳದಲ್ಲಿ ಸೌತ್ ತಾರೆಯರ ಸಮಾಗಮಾವಾಗಿರುವುದು ಮತ್ತೊಂದು ವಿಶೇಷ. ಲೋಕೇಶ್ ಸಾರಥ್ಯದ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ಟಾಲಿವುಡ್ ಮನ್ಮಥ ನಾಗಾರ್ಜುನ್, ಬಾಲಿವುಡ್ ಮಿಸ್ಟರ್ ಫರ್ಪೆಕ್ಟ್ ಆಮೀರ್ ಖಾನ್, ಸತ್ಯರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
16 ವರ್ಷ ಬಳಿಕ ತಮಿಳಿನಲ್ಲಿ ಉಪ್ಪಿ ಧಮಾಲ್
2008ರಲ್ಲಿ ತೆರೆಕಂಡಿದ್ದ ‘ಸತ್ಯಂ’ ಸಿನಿಮಾ ಮೂಲಕ ಉಪೇಂದ್ರ ತಮಿಳು ಸಿನಿಮಾರಂಗ ಪ್ರವೇಶಿಸಿದ್ದರು. ವಿಶಾಲ್ ಹೀರೋ ಆಗಿ ನಟಿಸಿದ್ದ ಚಿತ್ರದಲ್ಲಿ ಉಪ್ಪಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.. ಆನಂತರ ತಮಿಳಿನತ್ತ ಉಪ್ಪಿ ಮುಖ ಮಾಡಿರಲಿಲ್ಲ. ಇದೀಗ ‘ಕೂಲಿ’ ಚಿತ್ರದ ಮೂಲಕ ಪುನಃ ಕಾಲಿವುಡ್ಗೆ ಅವರು ಕಂಬ್ಯಾಕ್ ಆಗಿದ್ದಾರೆ.