ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಜೆಪಿ ಸಂಸದ ಪಿ.ಸಿ ಮೋಹನ್ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಗ್ವದ ನಡೆದಿದೆ. ಹೌದು ಸಿದ್ದರಾಮಯ್ಯನ ಸರ್ಕಾರ ಇರೋದು ರಾಜ್ಯದಲ್ಲಿ ನಿಮ್ಮಪ್ಪನ ಸರ್ಕಾರ ಅಲ್ಲ ಅಂತ ಏಕವಚನದಲ್ಲೇ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಆಕ್ಷೇಪ ಎತ್ತಿದರು.
ಕಾರಿನಲ್ಲಿ ನೀರಿನ ಬಾಟಲಿಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿದೆಯೇ? ಹಾಗಾದ್ರೆ ಕ್ಯಾನ್ಸರ್ ಇರಬಹುದು! ಎಚ್ಚರ
ಇದರಿಂದ ರೊಚ್ಚಿಗೆದ್ದ ಶಾಸಕ, ಇದೇನ್ ಬಿಜೆಪಿ ಪ್ರೋಗ್ರಾಮ್ ಅಂದುಕೊಂಡಿದ್ದೀರಾ? ಕಾಂಗ್ರೆಸ್ ಸರ್ಕಾರ ಇದೋದು, ಬಿಜೆಪಿ ಗುಣಗಾನ ಮಾಡೋದು ಮುಚ್ಚಬೇಕು ಇಲ್ಲಿ. ಬಾಯಿ ಮುಚ್ಕೊಂಡು ಕೂತ್ಕೊಬೇಕು. ಸಿದ್ದರಾಮಯ್ಯನ ಸರ್ಕಾರ ಇರೋದು ರಾಜ್ಯದಲ್ಲಿ ನಿಮ್ಮಪ್ಪನ ಸರ್ಕಾರ ಅಲ್ಲ ಅಂತ ಏಕವಚನದಲ್ಲೇ ಕಿಡಿಕಾರಿದ್ದಾರೆ.
ಇದು ಸಿದ್ದರಾಮಯ್ಯನ ಪ್ರೋಗ್ರಾಂ, ನಿಮ್ಮಪ್ಪನ ಪ್ರೋಗ್ರಾಂ ಅಲ್ಲ, ಸಿದ್ದರಾಮಯ್ಯನ ಕಾರ್ಯಕ್ರಮ ನಡೆಯುತ್ತಿರೋದು ಇಲ್ಲಿ.. ಗೆಟ್ ಲಾಸ್ಟ್ ಅಂತ ಕಿಡಿ ಕಾರಿದ್ದಾರೆ. ನಮಗೂ ನಮ್ಮ ಪಾರ್ಟಿ ಸಿದ್ಧಾಂತಗಳಿರುತ್ತೆ. ನೀವು ನಿಮ್ಮ ಪಕ್ಷವನ್ನ ಗುಣಗಾನ ಮಾಡಿದ್ರೆ, ನಾವು ನಮ್ಮ ಪಕ್ಷವನ್ನ ಗುಣಗಾನ ಮಾಡಬೇಕಾಗುತ್ತೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಈ ವೇಳೆ ಹಿಂಗೆಲ್ಲ ಹೇಳಬೇಡ್ರಿ ಅಂತ ಪ್ರದೀಪ್ ಈಶ್ವರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.