ಕೆನಡಾದ 24 ನೇ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ ಸ್ವೀಕರಿಸಿದ್ದಾರೆ, ಅಮೆರಿಕದೊಂದಿಗಿನ ಸ್ಫೋಟಕ ವ್ಯಾಪಾರ ಯುದ್ಧದ ಮಧ್ಯದಲ್ಲಿ ಮಾಜಿ ಕೇಂದ್ರ ಬ್ಯಾಂಕರ್ ಅವರನ್ನು ಅಧಿಕಾರಕ್ಕೆ ತಂದಿದ್ದಾರೆ. ಹೌದು ಈ ಮೊದಲು ಮಾರ್ಕ್ ಕಾರ್ನಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಕೆನಡಾದ ಅಧ್ಯಕ್ಷರಾಗಿದ್ದರು.
ಜನವರಿಯಲ್ಲಿ ಜಸ್ಟಿನ್ ಟ್ರುಡೋ ರಾಜೀನಾಮೆ ನೀಡಿದ್ದ ಹಿನ್ನೆಲೆ ಇತ್ತೀಚಿಗಷ್ಟೆ ಕಾರ್ನಿ ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಇದೀಗ ಕೆನಡಾದ 24ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕುರಿತು ಮಾತನಾಡಿರುವ ಕಾರ್ನಿ, ತಮ್ಮ ಸರ್ಕಾರ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದ್ದು,
ಕಾರಿನಲ್ಲಿ ನೀರಿನ ಬಾಟಲಿಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿದೆಯೇ? ಹಾಗಾದ್ರೆ ಕ್ಯಾನ್ಸರ್ ಇರಬಹುದು! ಎಚ್ಚರ
ಕೆನಡಿಯನ್ನರ ನಿರೀಕ್ಷೆ ಪೂರ್ಣಗೊಳಿಸಲಿದ್ದೇವೆ. ವೇಗವಾಗಿ ಚಲಿಸುವ, ನಮ್ಮ ಆರ್ಥಿಕತೆಯನ್ನು ಸುರಕ್ಷಿತಗೊಳಿಸುವ ಮತ್ತು ಕೆನಡಾದ ಭವಿಷ್ಯವನ್ನು ರಕ್ಷಿಸುವ ಅನುಭವಿ ಸಚಿವ ಸಂಪುಟ ನಮ್ಮದು ಎಂದಿದ್ದಾರೆ. 2013ರಲ್ಲಿ ಲಿಬರಲ್ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದ ಜಸ್ಟಿನ್ ಟ್ರುಡೋ, 2025ರ ಜನವರಿ 6 ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.