ಆನೇಕಲ್ : ಮೂರು ಮಂದಿ ಯುವಕರು ದ್ವಿಚಕ್ರವಾಹನದಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಗಾಂಜಾ ಮತ್ತಿನಲ್ಲಿ ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಆನೇಕಲ್ ತಾಲೂಕಿನ ಶೆಟ್ಟೆಹಳ್ಳಿ ಗ್ರಾಮದ ನಿವಾಸಿಗಳಾಗಿದ್ದ ರಾಹುಲ್, ಮಿಥುನ್, ಲೋಚನ್ ಎನ್ನಲಾಗುತ್ತಿದೆ. ಸದ್ಯ ಮೂರು ಮಂದಿಯ ಸ್ಥಿತಿಯು ಸಹ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿ ಸಲಾಗುತ್ತಿದೆ.
ಗಾಂಜಾ ಮತ್ತಿನಲ್ಲಿ ದ್ವಿಚಕ್ರ ವಾಹನಕ್ಕೆ ಹುಡುಕಿ ಹೊಡೆದಿದ್ದಲ್ಲದೆ ಅಲ್ಲಿಂದ ಹಿಟ್ ಅಂಡ್ ರನ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ವಿದ್ಯಾರ್ಥಿಗಳು ಕಾರಿನಲ್ಲಿ ನಾಲ್ಕು ಮಂದಿ ಇದ್ದು ಖಾಲಿ ಪ್ರದೇಶದಲ್ಲಿ ತಪ್ಪಿಸಿಕೊಳ್ಳಲು ಹೋಗಿ ಸಾಧ್ಯವಾಗದೆ ಕಾರನ್ನು ಅಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಇನ್ನು ಉಳಿದ ಮೂರು ಮಂದಿಯನ್ನು ಸ್ಥಳೀಯರು ಕಾರು ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂರು ಮಂದಿಯನ್ನು ಸಹ ಮಾಜಿ ಸಚಿವ ಎ ನಾರಾಯಣಸ್ವಾಮಿ ತಮ್ಮ ಕಾರಿನಲ್ಲಿ ಖುದ್ದಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಸೇರಿಸಿದ್ದಾರೆ.