2025ರ ಮೊದಲನೇ ಗ್ರಹಣವಾಗಿ ಚಂದ್ರಗ್ರಹಣವು ಮಾರ್ಚ್ 14, ಶುಕ್ರವಾರದ ದಿನದಂದು ಸಂಭವಿಸಲಿದೆ. ಚಂದ್ರಗ್ರಹಣವು ಆಕಾಶದಲ್ಲಿ ನಡೆಯುವ ಘಟನೆಯಾದರೂ ಸಹ ಆಧ್ಯಾತ್ಮಿಕವಾಗಿ ಚಂದ್ರಗ್ರಹಣಕ್ಕೆ ತುಂಬಾನೇ ಮಹತ್ವವಿದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನಾವು ಗ್ರಹಣದ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು, ಇನ್ನು ಕೆಲವೊಂದು ಕೆಲಸಗಳನ್ನು ಮಾಡಬಹುದು.
ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ಚಂದ್ರಗ್ರಹಣದಂದು ಹೋಳಿ, ಫಾಲ್ಗುಣ ಪೂರ್ಣಿಮಾದ ಸಂಯೋಗವೂ ಇದೆ. ಈ ಚಂದ್ರಗ್ರಹಣವು ಸಿಂಹ ರಾಶಿಚಕ್ರ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಅಲ್ಲದೆ, ಈ ಚಂದ್ರಗ್ರಹಣವು ರಕ್ತ ಚಂದ್ರನಂತೆ ಅಂದರೆ ಬ್ಲಡ್ ಮೂನಾಗಿ ಕಾಣಿಸಿಕೊಳ್ಳುವುದರಿಂದ ಇದನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತಿದೆ. ಈ ವರ್ಷದ ಮೊದಲನೇ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ಮಧುಮೇಹಿಗಳ ಔಷಧಿ ಬೆಲೆ ದಿಢೀರ್ ಕುಸಿತ: ರೋಗಿಗಳು ಖುಷ್! ಹಿಂದಿನ, ಇಂದಿನ ಬೆಲೆ ಎಷ್ಟು?
2025ರ ಮೊದಲನೇ ಚಂದ್ರಗ್ರಹಣದ ದಿನದಂದು ನೀವು ಈ ಕೆಲಸಗಳನ್ನು ಮಾಡಬೇಡಿ:
1. ಚಂದ್ರಗ್ರಹಣದ ಸಮಯದಲ್ಲಿ ಕೋಪಗೊಳ್ಳಬೇಡಿ, ಈ ದಿನ ಕೋಪಗೊಳ್ಳುವುದರಿಂದ ಮುಂದಿನ 15 ದಿನಗಳು ನಿಮಗೆ ಅಪಾಯವು ಎದುರಾಗುವುದು.
2. ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬೇಡಿ. ಇದಲ್ಲದೆ, ಪೂಜೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ.
3. ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ನಿರ್ಜನ ಸ್ಥಳ ಅಥವಾ ಸ್ಮಶಾನಕ್ಕೆ ಹೋಗಬಾರದು. ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಬಲ್ಯ ಸಾಧಿಸುತ್ತವೆ.
4. ಚಂದ್ರಗ್ರಹಣದ ಸಮಯದಲ್ಲಿ, ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು. ಯಾಕೆಂದರೆ ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯು ಮೇಲುಗೈ ಸಾಧಿಸುತ್ತದೆ.
5. ಗ್ರಹಣದ ಸಮಯದಲ್ಲಿ ಗಂಡ ಹೆಂಡತಿ ದೈಹಿಕ ಸಂಬಂಧವನ್ನು ಹೊಂದಬಾರದು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಶಾಂತಿ ಮತ್ತು ಸಂತೋಷ ಹಾಳಾಗಬಹುದು.
2025ರ ಮೊದಲನೇ ಚಂದ್ರಗ್ರಹಣದ ದಿನದಂದು ನೀವು ಈ ಕೆಲಸಗಳನ್ನು ಮಾಡಬಹುದು:
1. ಚಂದ್ರಗ್ರಹಣದ ಸಮಯದಲ್ಲಿ, ಒಬ್ಬರು ದೇವರ ಮಂತ್ರಗಳನ್ನು ಪಠಿಸುವುದು ತುಂಬಾನೇ ಒಳ್ಳೆಯದು. ಇದು ಹತ್ತು ಪಟ್ಟು ಹೆಚ್ಚು ಶುಭ ಫಲಗಳನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.
2. ಚಂದ್ರಗ್ರಹಣದ ನಂತರ ಶುದ್ಧ ನೀರಿನಿಂದ ಸ್ನಾನ ಮಾಡಿ ಬಡವರಿಗೆ ನಿಮ್ಮ ಕೈಲಾದಷ್ಟು ದಾನವನ್ನು ಮಾಡಬೇಕು.
3. ಚಂದ್ರಗ್ರಹಣದ ನಂತರ ಇಡೀ ಮನೆಯನ್ನು ಶುದ್ಧೀಕರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
4. ಗ್ರಹಣದ ಸಮಯದಲ್ಲಿ, ಹಸುಗಳಿಗೆ ಹುಲ್ಲು, ಪಕ್ಷಿಗಳಿಗೆ ಆಹಾರ ಮತ್ತು ನಿರ್ಗತಿಕರಿಗೆ ಬಟ್ಟೆಗಳನ್ನು ದಾನ ಮಾಡುವುದರಿಂದ ಅನೇಕ ಪಟ್ಟು ಹೆಚ್ಚಿನ ಪುಣ್ಯ ಸಿಗುತ್ತದೆ ಎನ್ನುವ ನಂಬಿಕೆಯಿದೆ.
ಚಂದ್ರಗ್ರಹಣದ ದಿನದಂದು ನೀವು ಯಾವುದೇ ಕೆಲಸಗಳನ್ನು ಮಾಡಲು ಹೊರಟರೂ ಅದರ ಬಗ್ಗೆ ಸರಿಯಾಗಿ ಯೋಚಿಸಿ ನಂತರ ಮಾಡಬೇಕು. ಒಂದು ವೇಳೆ ನೀವು ಮಾಡಲು ಹೊರಟ ಕೆಲಸಗಳಲ್ಲಿ ಸಮಸ್ಯೆಗಳು ಉಂಟಾದರೆ ಅದರಿಂದ ಕೆಟ್ಟ ಫಲಗಳು ಎದುರಾಗುತ್ತದೆ ಎನ್ನುವ ನಂಬಿಕೆಯಿದೆ. ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬೇಕು.? ಏನು ಮಾಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರಂತೆ ನಡೆದುಕೊಳ್ಳುವುದು ಉತ್ತಮ.