ಬೆಂಗಳೂರು: ಚಿನ್ನದ ಸುಳಿಯಲ್ಲಿ ಸಿಲುಕಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ ಆಗಿದ್ದು ಮತ್ತೆ ಜೈಲೇ ಗತಿಯಾಗಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ವಾದ-ಪ್ರತಿವಾದಗಳನ್ನು ಆಲಿಸಿದ್ದು ಬೇಲ್ ಅರ್ಜಿ ವಜಾಗೊಳಿಸಿ ಇಂದು ತೀರ್ಪು ಪ್ರಕಟಿಸಿದೆ..
ಡಿಆರ್ಐ ಪರ ವಕೀಲ ಮಧುರಾವ್ ಪ್ರಾಥಮಿಕ ತನಿಖೆಯ ವೇಳೆ ಆರೋಪಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವುದು ಕಂಡುಬಂದಿದೆ. ಚಿನ್ನವನ್ನ ಕೂಡ ವಶಕ್ಕೆ ಪಡೆದುಕೊಂಡು ತನಿಖೆ ಮಾಡಲಾಗುತ್ತಿದೆ. ಮನೆ ಶೋಧ ಕಾರ್ಯದ ವೇಳೆ ಕೋಟಿ ಕೋಟಿ ಹಣ ಹಾಗೂ ಚಿನ್ನಭರಣಗಳು ಪತ್ತೆ ಆಗಿವೆ. ಒಂದು ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿರುವ ಬಗ್ಗೆ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ.
ಹವಾಲ ಹಣದಲ್ಲಿ ವ್ಯವಹಾರ ಆಗಿರುವ ಬಗ್ಗೆ ಅನುಮಾನಗಳು ಕೂಡ ಇವೆ. ಪೊಲೀಸ್ ಪ್ರೋಟೊಕಾಲ್ ದುರುಪಯೋಗ ಆಗಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಆರೋಪಿ ನಟಿ ರನ್ಯಾ ರಾವ್ಗೆ ಜಾಮೀನು ನೀಡಿದರೆ, ತನಿಖೆಗೆ ಹಿನ್ನಡೆ ಆಗುತ್ತದೆ ಎಂದು ಡಿಆರ್ಐ ಪರ ವಕೀಲ ಪ್ರತಿವಾದ ಮಾಡಿದ್ದಾರೆ. ವಾದ-ಪ್ರತಿವಾದ ಅಲಿಸಿರುವ ನ್ಯಾಯಾದೀಶರು ಇಂದಿಗೆ ಆದೇಶ ಕಾಯ್ದಿರಿಸಿದ್ದರು. ಇದೀಗ ತೀರ್ಪು ಪ್ರಕಟಿಸಿದ್ದು, ರನ್ಯಾ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಜಾಮೀನು ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಇದ್ದ ರನ್ಯಾಗೆ ಗ್ ಶಾಕ್ ಆಗಿದೆ. ರನ್ಯಾ ಪರ ವಕೀಲರು ನಾಳೆ ಬಹುತೇಕ ಹೈಕೋರ್ಟ್ ನಲ್ಲಿ ರ್ಜಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ.
ರನ್ಯಾ ಜಾಮೀನು ವಜಾ ಆಗಲು ಕಾರಣಗಳೇನು..?
- ರನ್ಯಾ ರಾವ್ ಕೇಸ್ ನಲ್ಲಿ ಅಂತರರಾಷ್ಟ್ರೀಯ ಲಿಂಕ್ ಗಳು ಇವೆ.
- ಕಸ್ಟಮ್ಸ್ ಬ್ಯಾಬೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೊರ ಬಂದಲ್ಲಿ ಸಾಕ್ಷಿ ನಾಶಗಳನ್ನು ಮತ್ತು ಮಿಸ್ ಲೀಡ್ ಮಾಡಬಹುದು.
- ಆಕೆಗೆ ಒಂದು ವರ್ಷದ ಅವಧಿಯಲ್ಲಿ ಇಪತ್ತೇಳು ಬಾರಿ ವಿದೇಶಿ ಪ್ರಯಾಣ ಮಾಡಿದ್ದಾರೆ
- ಇದರಿಂದ ಮೂವತ್ತೆಂಟು ಪರ್ಸೆಂಟ್ ಕಸ್ಟಮ್ಸ್ ಸುಂಕ ವಂಚನೆ ಆಗಿದೆ.
- ಇದರಿಂದ ಒಟ್ಟು 4,83,72,694 ರೂ ಸುಂಕ ವಂಚನೆ ಆಗಿದೆ. ಆಕೆಯ ಬಳಿ ದುಬೈ ರೆಸಿಡೆಂಟ್ ಐಡೆಂಟಿಟಿ ಕಾರ್ಡ್ ಇದೆ.