ಹುಬ್ಬಳ್ಳಿ : ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘದ ವತಿಯಿಂದ ಹಾಗೂ ವಿ ಎ ಕೆ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಟೆನ್ನಿಸ್ ಬಾಲ್ ಪಂದ್ಯಾವಳಿಯಲ್ಲಿ ಎಂ ಆರ್ ಸಿ ವಾರ್ರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೃಷ್ಣ ಕಲರ್ ಲ್ಯಾಬ್ ರನ್ನರಪ್ಪ ಆಗಿ ತೃಪ್ತಿಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಮಾಜಿ ಶಾಸಕರಾದ ಶ್ರೀಯುತ ಅಶೋಕ್ ಕಾಟ್ವೇ ಛಾಯಾಗ್ರಾಹಕರು ತಮ್ಮ ಕೆಲಸದ ಒತ್ತಡದಲ್ಲಿಯೂ ಹಿಂತಹ ಕ್ರೀಡೆಗಳನ್ನು ಆಡುವುದರ ಮುಖಾಂತರ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಂಡು ಹೋಗುವುದಕ್ಕೆ ನೆರವಾಗುತ್ತದೆ ಆಟವನ್ನು ಕ್ರೀಡಾಮನೋಭಾವದಿಂದ ನೋಡಬೇಕು ಸೋಲಿನಲ್ಲೂ ಕೂಡ ಗೆಲುವು ಕಾಣಬೇಕು ಅಂದಾಗ ಮಾತ್ರ ನಾಳೆ ತಾವು ಕೂಡ ಶ್ರಮವಹಿಸಿ ಗೆಲುವಿನ ಅಂತಿಮ ಘಟ್ಟ ತಲುಪಬಹುದು ಎಂದರು.
ಮುಂದುವರಿದ MES ಪುಂಡಾಟ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ!
ಫೋಟೋಗ್ರಾಫರ್ ಸಂಘದ ಎಲ್ಲ ಪದಾಧಿಕಾರಿಗಳು ಈ ಪಂದ್ಯಾವಳಿಗೆ ನೆರವಿನ ಹಸ್ತ ತೋರಿದ ಎಲ್ಲಾ ದಾನಿಗಳನ್ನು ಅಭಿನಂದಿಸಿದರು. ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷರಾದ ದಿನೇಶ್ ದಾಬಡೆ, ಸಂಘದ ಕಾರ್ಯದರ್ಶಿಯಾದ ರವೀಂದ್ರ ಕಾಟಿಗರ್, ಪದಾಧಿಕಾರಿಗಳಾದ ರಾಕೇಶ್ ಪವಾರ್, ವಿಜಯ್ ಮೆಹರ್ವಾಡೆ, ವಿಜಯ್ ಬಾಕಳೆ, ಆನಂದ್ ಮೆರ್ವಾಡೆ, ಕೃಷ್ಣ ಪೂಜಾರಿ, ಪ್ರಕಾಶ್ ಬಸವ, ಆನಂದ ರಾಜಲ್ಲಿ, ಹಾಗೂ ದಾನಿಗಳಾದ ಅಶೋಕ್ ಇರಕಲ್, ಮಹಾವೀರ ಜೈನ್, ಲಲಿತ್ ಜೈನ್, ಅಲ್ಲದೆ ಪಂದಾವಳಿಯ ನೇತೃತ್ವ ವಹಿಸಿದ ವೀರು ಬಸವಾ, ಪವನ ಕಠಾರೆ, ಇನ್ನಿತರರೂ ಉಪಸ್ಥಿತರಿದ್ದರು.