ವಿಜಯಪುರ:- ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಕಂಟ್ರೀ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಇಟ್ಟುಕೊಂಡಿದ್ದ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಸಿಲಿಕಾನ್ ಸಿಟಿ ಇದೀಗ ಗಾರ್ಬೇಜ್ ಸಿಟಿ: ಎಲ್ಲಿ ನೋಡಿದರು ಕಸ.. ಕಸ – ಗಬ್ಬು ನಾರುತ್ತಿರುವ ರಸ್ತೆಗಳು
ಬಂಧಿತರಿಂದ ಐದು ಕಂಟ್ರೀ ಪಿಸ್ತೂಲ್ ಹಾಗೂ ಆರು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದ ಹವೇಲಿ ಗಲ್ಲಿ ನಿವಾಸಿ ನಯೀಮ್ ಶಾಮಣ್ಣವರ ಬಳಿಯಿದ್ದ 1 ಕಂಟ್ರೀ ಪಿಸ್ತೂಲ್ 1 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ನಗರದ ಭವಾನಿ ನಗರದ ನೇಹಾಲ್ ತಾಂಬೋಳಿ ಬಳಿ 3 ಕಂಟ್ರೀ ಪಿಸ್ತೂಲ್ 4 ಜೀವಂತ ಗುಂಡುಗಳು ವಶಕ್ಕೆ ಪಡೆಯಲಾಗಿದೆ.
ಯೋಗಾಪೂರ ಕಾಲೋನಿಯ ಸಿದ್ದು ಮೂಡಲಗಿ ಎಂಬಾತನ ಬಳಿ 1 ಕಂಟ್ರೀ ಪಿಸ್ತೂಲ್ 1 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗೋಲಗುಂಬಜ್ ವೃತ್ತದ ಇನ್ಸಪೆಕ್ಟರ್ ಮಲ್ಲಯ್ಯ ಮಠಪತಿ ಎಪಿಎಂಸಿ ಪಿ ಎಸ್ ಐ ಜ್ಯೋತಿ ಖೋತ್ ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆದಿದ್ದು, ಕಂಟ್ರೀ ಪಿಸ್ತೂಲ್ ಜಾಲ ಬೇಧಿಸಿದ ತಂಡಕ್ಕೆ ಎಸ್ ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದರು.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.