ವಿಜಯಪುರ:- ಸಾಕಷ್ಟು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿರುವ ಘಟನೆ ವಿಜಯಪುರದಲ್ಲಿ ಜರುಗಿದೆ.
ʼನವಗ್ರಹʼ ಬ್ಯೂಟಿಗೆ ಬೊಂಬಾಟ್ ಚಾನ್ಸ್..ದಾಸನ ʼಡೆವಿಲ್ʼಗೆ ಶರ್ಮಿಳಾ ಮಾಂಡ್ರೆ ಎಂಟ್ರಿ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಮಣಅಂಕಲಗಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲಾಗಿದ್ದು, ಗ್ರಾಮಸ್ಥರ ಕಾರ್ಯಾಚರಣೆ ವಿಡಿಯೋ ಇದೀಗ ವೈರಲ್ ಆಗಿದೆ. ಸೆರೆ ಹಿಡಿಯುವ ವೇಳೆ ನಾಲ್ಕು ಜನರ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆ ಹಿಡಿಯಲು ಬಲೆಗಳ ಸಮೇತ ಗ್ರಾಮಸ್ಥರು ಕಾರ್ಯಾಚರಣೆಗೆ ಇಳಿದಿದ್ದರು.
ಈ ವೇಳೆ ನಾಲ್ವರಿಗೆ ಚಿರತೆ ಕಚ್ಚಿದ್ದು, ಚಡಚಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂದಿ ಹಿಡಿಯುವ ಬಲೆ ಬಳಸಿ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದರು. ಮೊದಲು ಚಿರತೆ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಕರೆ ಮಾಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಬಂದಮೇಲೆ ಚಿರತೆಯನ್ನು ಗ್ರಾಮಸ್ಥರು ಒಪ್ಪಿಸಿದ್ದಾರೆ.