ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್ ಭರದಿಂದ ಮೈಸೂರಿನಲ್ಲಿ ಸಾಗುತ್ತಿದೆ. ನಿನ್ನೆಯಿಂದ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ನಡೆಯುತ್ತಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದಾಸ ಜಾಮೀನಿನ ಮೇಲೆ ಬಿಡುಗಡೆಯಾಗಿ ತಿಂಗಳುಗಳು ಕಳೆದಿವೆ. ಈಗ ಬೆನ್ನು ನೋವು ಕಡಿಮೆಯಾಗಿದ್ದು, ಮತ್ತೆ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಮಿಲನಾ ಪ್ರಕಾಶ್ ಆಕ್ಷನ್ ಕಟ್ ನಲ್ಲಿ ಮೂಡಿ ಬರ್ತಿರುವ ಡೆವಿಲ್ ಸಿನಿಮಾಕ್ಕೀಗ ನವಗ್ರಹ ಸಿನಿಮಾ ಖ್ಯಾತಿಯ ನಟಿ ಶರ್ಮಿಳಾ ಮಾಂಡ್ರೆ
ಎಂಟ್ರಿ ಕೊಟ್ಟಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ತಾವು ಇರುವ ಕ್ಯಾರವಾನ್ ಫೋಟೋವನ್ನು ಶರ್ಮಿಳಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದ್ರೆ ಅವರ ಪಾತ್ರವೇನು ಎಂಬುವುದು ರಿವೀಲ್ ಆಗಿಲ್ಲ. ಇನ್ನೂ ಈ ಹಿಂದೆ ‘ನವಗ್ರಹ’ ಚಿತ್ರದಲ್ಲಿ ದರ್ಶನ್ ಜೊತೆ ಶರ್ಮಿಳಾ ತೆರೆಹಂಚಿಕೊಂಡಿದ್ದರು. ಇದೀಗ 2ನೇ ಬಾರಿ ದಚ್ಚು ಜೊತೆ ಶರ್ಮಿಳಾ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ಖುಷಿಯಲ್ಲಿದ್ದಾರೆ.
ಡೆವಿಲ್ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಾಗಿ ನವಪ್ರತಿಭೆ ರಚನಾ ರೈ ಅಭಿನಯಿಸುತ್ತಿದ್ದಾರೆ. ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ ವಿನಯ್ ಗೌಡ ದಾಸನ ಎದುರು ತೊಡೆ ತಟ್ಟಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣದಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದೆ.