ಬೀದರ್ :- ಹೋಳಿ ಹಬ್ಬದ ಪ್ರಯುಕ್ತ ಬೀದರ ನಗರದಲ್ಲಿ ಸಂಭ್ರಮದ ರಂಗಿನ ಓಕಳಿಯಾಟದಲ್ಲಿ ಕುಣಿದು ಕುಪ್ಪಳಿಸಿದ ಯವಕ ಯವತಿಯರು..ನಗರದ ರಾಮಪುರೆ ಬಡಾವಣೆಯಲ್ಲಿ ಹೆಂಗಳಿಯರು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚಿ ಕುಣಿದು ಸಂಭ್ರಮಿಸಿದ್ರು ವಿವಿಧ ಹಾಡಿಗೆ ಸ್ಟೆಪ್ ಹಾಕಿ ನೋಡುಗರ ಗಮನ ಸೆಳೆದರು…
ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ ಮಾಡಿ ಹೋಳಿ ಹಬ್ಬದ ಸಂಭ್ರಮ ದಲ್ಲಿ ಭಾಗಿಯಾಗಿ ರಂಗಿನ ಆಟದಲ್ಲಿ ಮಿಂದೆದರು ನಗರದ ಅಂಬೇಡ್ಕರ್ ವೃತದಲ್ಲಿ ಸೇರಿದಂತೆ ವಿವಿಧಡೆ ಮಂಗಳ ಮುಖಿಯರು ಹೋಳಿ ಹಬ್ಬ ಹಿನ್ನೆಲೆ ನಗರದ ಪ್ರಮುಖ ರಸ್ತೆ ಯಲ್ಲಿ ಬಣ್ಣ ಎರಚಿ ಸಂಭ್ರಮದಿಂದ ಹಾಡಿಗೆ ಕುಣಿದಾಡಿದ್ರು. ವಿವಿಧ ಹಾಡಿಗೆ ರಸ್ತೆ ಮೇಲೆ ಡ್ಯಾನ್ಸ ಮಾಡಿ ನೋಡುಗರ ಗಮನ ಸೇಳದರು.
ಪ್ರತಿ ವರ್ಷದಂತೆ ಈ ವರ್ಷ ಹೋಳಿ ಹಬ್ಬದ ಸಂಭ್ರಮ ನಗರದಲ್ಲಿ ಜೋರಾಗಿ ಕಂಡುಬಂತು ನಗರದ ಕ್ರಾಂತಿ ಗಣೇಶ ಹಾಗೂ ಕೆ ಇ ಕಚೇರಿ ಮುಂಭಾಗದಲ್ಲಿ ಡಿಜೆ ಹಾಡಿಗೆ ಕುಣಿದು ಪರಸ್ಪರ ಒಬ್ಬರ ಬಟ್ಟೆ ಒಬ್ಬರು ಹರಿದುಕೋಂಡು ಬಣ್ಣದ ನೀರು ಎರಚಿ ಹೋಳಿ ಹಬ್ಬ ಸಂತಸದಿಂದ ಸಂಭ್ರಮಿಸಿದ್ರು..
ಜೀವನದಲ್ಲಿ ಸಂತೋಷ ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂಭಾಗದಲ್ಲಿ ಮಕ್ಕಳು ಹೋಳಿ ಆಚರಣೆ ಮಾಡಿದ್ರು….
ಬೀದರ ಜಿಲ್ಲಾ ಪೋಲಿಸರು ನಗರದಾದ್ಯಂತ ಹದ್ದಿನ ಕಣ್ಣಿಟಿದ್ರು ಯಾವುದೇ ಅಹಿತಕರ ಘಟನೆ ನಡೆದಂತೆ ಬಿಗಿ ಪೋಲಿಸ್ ಬಂದೋಬಸ್ತ ವ್ಯವಸ್ಥೆ ಕಂಡುಬಂತ್ತು….