ಧಾರವಾಡ:-ಹಳೆ ವೈಶಮ್ಯದಿಂದ ಮುಖ್ಯ ಶಿಕ್ಷಕನೋರ್ವ ಶಾಲಾ ಮಕ್ಕಳ ಭವಿಷ್ಯ ಹಾಳು ಮಾಡಲು ಮುಂದಾದ ಘಟನೆ ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದ ಸರಕಾರಿ ಪ್ರೌಡ ಶಾಲೆಯಲ್ಲಿ ಜರುಗಿದೆ.
ಬೆಂಗಳೂರು ಜನತೆಗೆ ಬಿಗ್ ಶಾಕ್: ಪ್ರತಿ 1 ಲೀಟರ್ ನೀರಿಗೆ 1 ಪೈಸೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ..!
ಮುಖ್ಯ ಶಿಕ್ಷಕ ಪ್ರಕಾಶ ರಾಠೋಡ ಎಂಬುವರ ಮೆಲೆ ಬಾಲಕಿ ತಾಯಿ ಮಂಜುಳಾ ಗಂಭೀರ ಆರೋಪ ಮಾಡಿದ್ದಾರೆ. ಬಾಲಕಿ ಮಾರ್ಚ 4 ರಂದು ರುತುಮತಿಯಾಗಿದ್ದಳು. ಒಂದು ವಾರ ಮುಖ್ಯ ಶಿಕ್ಷಕರಿಂದ ಅನುಮತಿ ಪಡೆದು ಬಾಲಕಿ ಶಾಲೆಗೆ ಗೈರಾಗಿದ್ದಳು. ಹಾಗೆ ಮಾರ್ಚ 5 ರಿಂದ ನಡೆದ ಓರಲ್ ಪರೀಕ್ಷೆಗೂ ಹಾಜರಾಗಿರಲಿಲ್ಲ. ಮಾರ್ಚ 11 ರಂದು ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಹೋದಾಗ ಪರೀಕ್ಷೆಗೆ ಶಾಲಾ ಶಿಕ್ಷಕರು,ಮತ್ತು ಮುಖ್ಯ ಶಿಕ್ಷಕ ಅನುಮತಿ ಕೊಟ್ಟಿಲ್ಲ. ನೀನು ಪರೀಕ್ಷೆ ಬರೆಯಲು ಬರೋದಿಲ್ಲ ಎಂದು ಬಾಲಕಿಯನ್ನ ಶಾಲೆಯಿಂದ ಶಿಕ್ಷಕರು ಹೊರ ಹಾಕಿದ್ದಾರೆ. ಈ ವೇಳೆ ಕಣ್ಣೀರು ಹಾಕುತ್ತಾ ಮಾಧ್ಯಮಗಳ ಮುಂದೆ ಬಾಲಕಿ ತಾಯಿ ಮಂಜುಳಾ ಅಳಲು ತೋಡಿಕ್ಕೊಂಡಿದ್ದಾರೆ.
ಹೌದು, ಶಾಲೆಯ ಹಿಂಬಾಗದಲ್ಲಿ ಮಂಜುಳಾ ಮೇರದಕರ್ ಕಳೆದ 40 ವರ್ಷಗಳಿಂದಲೂ ಶೆಡ್ಡು ನಿರ್ಮಾಣ ಮಾಡಿದ್ದರು. ಶೆಡ್ಡ ವಿಚಾರವಾಗಿ ಬಾಲಕಿ ಪೋಷಕರಿಗೂ ಮುಖ್ಯ ಶಿಕ್ಷಕ ರಾಠೋಡ ಇವರಿಗೆ ಮೊದಲಿನಿಂದಲೂ ನ್ಯಾಯ ನಡೆಯುತ್ತಿದೆ. ಶಾಲಾ ಆವರಣದಲ್ಲಿ ಶೆಡ್ಡ ನಿರ್ಮಾಣ ಮಾಡಿದ್ದಾರೆ ಎಂದು ಶಿಕ್ಷಕನ ವಾದ. ಆದರೆ ಶೆಡ್ಡು ವಿಚಾರವನ್ನ ಮುಂದಿಟ್ಟುಕ್ಕೊಂಡು ದ್ವೇಷ ಸಾಧಿಸಲು ಶಿಕ್ಷಕ ಮುಂದಾಗಿದ್ದಾರೆ. ಈ ಭಾರಿನು 8 ನೇಯ ತರಗತಿಯಲ್ಲಿ ಕುಳಿತುಕ್ಕೊಳ್ಳಬೇಕು ಎಂದು ಟೀಚರ್ ಗಳು ಹೇಳಿದ್ದಾರೆ. ಬಾಲಕಿ ಮತ್ತು ಬಾಲಕಿಯ ಸಹೋದರನಿಗೆ ಶಿಕ್ಷಕರು ತೋಂದರೆ ಕೊಡುತ್ತಿರುವ ಆರೋಪ ಕೇಳಿ ಬಂದಿದೆ. ಸದ್ಯ ಮುಖ್ಯ ಶಿಕ್ಷಕ ಪ್ರಕಾಶ್ ರಾಠೋಡ, ಮತ್ತು ಶಿಕ್ಷಕರ ಮೆಲೆ ಗಂಭಿರ ಆರೋಪ ಕೇಳಿ ಬಂದಿದ್ದು, ಮುಂದೆ ಏನಾಗುತ್ತೋ ಕಾದು ನೋಡಬೇಕಾಗಿದೆ.