ಮುಂಬೈ:- ಮುಂಬೈ-ಅಮರಾವತಿ ಎಕ್ಸ್ಪ್ರೆಸ್ ರೈಲು ಲಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಬೋದ್ವಡ್ ರೈಲ್ವೆ ನಿಲ್ದಾಣದ ಸಮೀಪ ಜರುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಸೈಡ್ ಪಿಕಪ್ ಚಾಲಕರ ಹಾವಳಿ: ಚಾಲಕರ ನಡುವೆ ಹೊಡೆದಾಟ
ರೈಲ್ವೆ ಕ್ರಾಸಿಂಗ್ನಲ್ಲಿ ಗೇಟ್ ಹಾಕಿದ್ದರೂ ಕೂಡ ವೇಗವಾಗಿ ಬಂದ ಲಾರಿ ರೈಲ್ವೆ ಹಳಿಗಳ ಮಧ್ಯೆ ಸಿಲುಕಿಕೊಂಡಿತ್ತು. ಆಗ ರೈಲು ಲಾರಿಗೆಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಅಥವಾ ರೈಲಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ಈ ಮಾರ್ಗದಲ್ಲಿ 6 ಗಂಟೆಗಳ ಕಾಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು