ಬೆಂಗಳೂರು(ದೇವನಹಳ್ಳಿ)- ಕೆಂಪೇಗೌಡ ಏರ್ಪೋಟ್ ನಲ್ಲಿ ರಾತ್ರಿ ವೇಳೆ ಸೈಡ್ ಪಿಕಪ್ ಚಾಲಕರ ಹಾವಳಿ ಜೋರಾಗಿದೆ. ಸೈಡ್ ಪಿಕ್ ಅಪ್ ಮಾಡಲು ಬಂದವರನ್ನ ಪ್ರಶ್ನಿಸಿದಕ್ಕೆ ಗಲಾಟೆ ನಡೆದಿದ್ದು ಏರ್ಪೋಟ್ ಲ್ಯಾನ್ ಸೈಡ್ ಸಿಬ್ಬಂದಿ ಹಾಗೂ ಚಾಲಕರ ನಡುವೆ ಭಾರಿ ಗಲಾಟೆ ನಡೆದಿದೆ. ಈ ವೇಳೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಟಕ್ಕೂ ಕಾರಣವಾಗಿದೆ.
ಕಳೆದ ಹಲವು ದಿನಗಳಿಂದ ಏರ್ ಪೋರ್ಟ್ ನಲ್ಲಿ ಸೈಡ್ ಪಿಕ್ ಅಪ್ ಹಾವಳಿ ಹೆಚ್ಚಾಗಿದೆ.
ಕಳೆದ ಮೂರು ತಿಂಗಳಿಂದೆ ಸೈಡ್ ಪಿಕ್ ಅಪ್ ಚಾಲಕನಿಂದ ಮಹಿಳೆಗೆ ಕಿರುಕುಳ ನೀಡಿದ ಆರೋಪ ಬಂದಿತ್ತು. ಹೀಗಾಗಿ ಸೈಡ್ ಪಿಕ್ ಅಪ್ ಬಗ್ಗೆ ಏರ್ಪೋಟ್ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದರು. ಕಳೆದ ರಾತ್ರಿಯು ಪಿಕ್ ಅಪ್ ಪಾಯಿಂಟ್ ನಲ್ಲಿ ಸೈಡ್ ಪಿಕ್ ಮಾಡ್ತಿದ್ದ ಚಾಲಕರನ್ನ ಪ್ರಶ್ನಿಸಿದಕ್ಕೆ ಗಲಾಟೆ ಮಾಡಿ ಹಲ್ಲೆ ಮಾಡಲಾಗಿದೆ. ಸಾರ್ವಜನಿಕರ ಮುಂದೆಯೆ ಪಿಕ್ ಅಪ್ ಪಾಯಿಂಟ್ ಚಾಲಕರು ಹಾಗೂ ಲ್ಯಾನ್ ಸೈಡ್ ಸಿಬ್ಬಂದಿ ನಡುವೆ ಹೊಡೆದಾಟದ ದೃಶ್ಯ ಪ್ರಯಾಣಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಒಲಾ ಉಬರ್ ಏರ್ಪೋಟ್ ಟ್ಯಾಕ್ಸಿ ಹೊರತುಪಡಿಸಿ ಖಾಸಗಿಯಾಗಿ ಬಂದು ಬಾಡಿಗೆ ಹೊಡೆಯುವ ಸೈಡ್ ಪಿಕ್ ಅಪ್ ವಾಹನಗಳ ವಿರುದ್ಧ ಕೆಂಪೇಗೌಡ ಏರ್ಪೋಟ್ ಪೊಲೀಸ್ ಠಾಣೆಗೆ ಏರ್ಪೋಟ್ ಸಿಬ್ಬಂದಿಯಿಂದ ದೂರು ನೀಡಿದ್ದಾರೆ.