ತೀರ್ಥಹಳ್ಳಿ:- ಸಾಲಬಾಧೆ ತಾಳಲಾರದೇ ನದಿಗೆ ಹಾರಿ ಯುವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿಯಲ್ಲಿ ಜರುಗಿದೆ.
ಭಯೋತ್ಪಾದನೆಗೆ ಪ್ರೋತ್ಸಾಹ: ಭಾರತದ ಮೇಲೆ ಬೊಟ್ಟು ಮಾಡಿದ ಪಾಕ್ ಗೆ ಕೇಂದ್ರ ತರಾಟೆ!
ಇಲ್ಲಿನ ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಶವ ಕೊನೆಗೂ ಪತ್ತೆಯಾಗಿದೆ. 30 ವರ್ಷ ಕೌಶಿಕ್ ಮೃತ ರೈತ. ಇವರು ಕೈಮರ ಸಮೀಪದ ಹಾಗಲಮನೆ ವಾಸಿ ಎನ್ನಲಾಗಿದೆ. ಅವಿವಾಹಿತ ಕೌಶಿಕ್ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ ಅವರು ಮಾಗರವಲ್ಲಿ ಸೊಸೈಟಿ, ಧರ್ಮಸ್ಥಳ ಸಂಘ, ಮೈಕ್ರೋ ಫೈನಾನ್ಸ್ ಸೇರಿದಂತೆ ಹಲವು ಕಡೆ ಬಡ್ಡಿಗೆ ಸಾಲ ಪಡೆದಿದ್ದರು.
ಇದೇ ಹೊರೆಯಾಗಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಅಡಕೆಗೆ ಕಾಣಿಸಿಕೊಂಡಿರುವ
ಎಲೆ ಚುಕ್ಕಿ ರೋಗದಿಂದ ಒಂದೆಡೆ ರೈತ ಕಂಗೆಟ್ಟಿದ್ದ. ಹೀಗಾಗಿ ಸಾಲ ತೀರಿಸಲು ದಿಕ್ಕೇ ತೋಚದಂತಾಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.