ಬೆಳಗಾವಿ;- ಮಹಾರಾಷ್ಟ್ರದಲ್ಲಿ MES ಪುಂಡರ ಪುಂಡಾಟ ಮುಂದುವರಿದಿದೆ. ಕಿಡಿಗೇಡಿಗಳು ಮತ್ತೆ ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಪೋಕ್ಸೋ ಕೇಸಲ್ಲಿ ರಾಜಾಹುಲಿಗೆ ಬಿಗ್ ರಿಲೀಫ್ : ಸಮನ್ಸ್ಗೆ ತಡೆ ನೀಡಿದ ಹೈಕೋರ್ಟ್
ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿ ಪಟ್ಟಣದಲ್ಲಿ ಈ ಘಟನೆ ಜರುಗಿದ್ದು, ಕರ್ನಾಟಕ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ಮಾಡಿ ಕಿಡಿಗೇಡಿಗಳು, ದುಷ್ಕೃತ್ಯ ಮೆರೆದಿದ್ದಾರೆ. ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಪುಂಡಾಟ ನಡೆಸಿದ್ದಾರೆ. ಚಿಕ್ಕೋಡಿ ಇಂಚಲಕರಂಜಿ ಬಸ್ ಗೆ ಕಲ್ಲು ತೂರಾಟ ಮಾಡಿದ ಪರಿಣಾಮ ಬಸ್ಸಿನ ಗಾಜುಗಳು ಪುಡಿ ಪುಡಿ ಆಗಿದೆ. ಕಲ್ಲು ತೂರಾಟ ಮಾಡ್ತಿದ್ದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಲ್ಲು ತೂರಾಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.