ಗದಗ: ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ. ಅದರಂತೆ ಕರ್ನಾಟಕದಲ್ಲೂ ಹೋರಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೋಳಿಯನ್ನು ಬಹಳ ವಿಶೇಷವಾಗಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
ಅಕ್ರಮವಾಗಿ ತಂಬಾಕು ಶೇಖರಿಸಿಟ್ಟಿದ್ದ ಗೋದಾಮಿನ ಮೇಲೆ CCB ರೇಡ್: 45 ಲಕ್ಷ ಮೌಲ್ಯದ ತಂಬಾಕು ಸೀಜ್..!
ಆದರೆ ಇದೇ ಹೋಳಿ ಹಬ್ಬದಲ್ಲಿ ಎಡವಟ್ಟು ಆಗಿದೆ. ಸರ್ಕಾರಿ ಬಸ್ ಗೆ ಮೊಟ್ಟೆ, ಸಗಣಿ, ಕಲುಷಿತ ಬಣ್ಣ ಎರಚಿದ ಪರಿಣಾಮ ಬಸ್ ಕಿಟಕಿ ಕ್ಲೋಸ್ ಮಾಡಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಉಸಿರಾಟ ತೊಂದರೆಯಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಲ್ಲಿ ನಡೆದಿದೆ.
ಯುವಕರ ತಂಡ ಹೋಳಿ ಹಬ್ಬದ ನಿಮಿತ್ತ ಬಸ್ ಗೆ ಬಣ್ಣ, ಸೆಗಣಿ ಎರಚಿ ಪುಂಡಾಟ ಮೆರೆದಿದ್ದಾರೆ. ಬಣ್ಣ ಬೀಳಬಾರದು ಎಂದು ಸ್ಟೂಡೆಂಟ್ಸ್ ಕಿಟಕಿ ಕ್ಲೋಸ್ ಮಾಡಿದ್ದರು. ಕಿಟಕಿ ಕ್ಲೋಸ್ ಆಗಿದ್ದಕ್ಕೆ ಉಸಿರಾಟದ ತೊಂದರೆಯಿಂದ ಹಲವು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು
ಉಸಿರಾದ ತೊಂದರೆ, ಎದೆ ನೋವು ಅಂತಾ ಕಣ್ಣೀರಾಗಿದ್ದಾರೆ. ತಕ್ಷಣವೇ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ತಂಡ ದಿಂದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.