ಕೊಪ್ಪಳ:ಜಿಲ್ಲೆಯಾದ್ಯಂತ ಸಂಭ್ರಮದಿಂದ ಇಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ.
Virat Kohli: 14 ವರ್ಷದ ಬಾಲಕಿಯ ಸಾವಿಗೆ ಕೊಹ್ಲಿ ಕಾರಣನಾ..!? ಪ್ರಿಯಾಂಕಾ ತಂದೆ ಹೇಳಿದ್ದೇನು..?
ಕೊಪ್ಪಳ ನಗರದ ತಾಲೂಕ ಕ್ರೀಡಾಂಗಣದಲ್ಲಿ ಹೋಳಿ ಹಬ್ಬ ಆಚರಣೆಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಂಸದ ರಾಜಶೇಖರ ಹಾಗೂ ಶಾಸಕ ರಾಘವೇಂದ್ರ ಸೇರಿದಂತೆ ಜನಪ್ರತಿನಿಧಿಗಳು ಹೋಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಕೊಪ್ಪಳದಲ್ಲಿ ಸಾರ್ವಜನಿಕರಿಗಾಗಿ ಹೋಳಿ ಹಬ್ಬದ ಆಚರಣೆಗೆ ಸಕಲ ವ್ಯವಸ್ತೆಗಳನ್ನು ಮಾಡಲಾಗಿದೆ.
ಇದೇ ರೀತಿ ಕೊಪ್ಪಳ ಜಿಲ್ಲೆಯ ವಿವಿಧಡೆಯಲ್ಲಿ ಸಹಿತ ಸಂಭ್ರಮದಿಂದ ಮಕ್ಕಳು, ಹಿರಿಯರು ಎನ್ನದೆ ಎಲ್ಲರೂ ಸೇರಿಕೊಂಡು ಸಂಭ್ರಮ ಹಾಗೂ ಸಡಗರದಿಂದ ಬಣ್ಣ ಪರಸ್ಪರ ಹಾಕಿ ಸಂಭ್ರಮದ ಹಬ್ಬವನ್ನು ಆಚರಿಸಿದರು. ತಾಲೂಕ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿರುವ ಡಿಜೆಗೆ ಮಕ್ಕಳು ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು.