ವಿಜಯನಗರ:- ನಾಳೆಯ ಹಾಜರಾತಿಗೆ ಇಂದೇ ಸಹಿ ಹಾಕಿದ ಸರ್ಕಾರಿ ಆಸ್ಪತ್ರೆ ‘ಡಿ’ ಗ್ರುಪ್ ನೌಕರ ಉಪಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಹೊಸಪೇಟೆ ನಗರದಲ್ಲಿ ಜರುಗಿದೆ.
Puneeth Rajkumar: ಮಗನ ಜೊತೆ “ಅಪ್ಪು” ಸಿನಿಮಾ ನೋಡಿದ ರಕ್ಷಿತ ಪ್ರೇಮ್..!
ಹೊಸಕೋಟೆ ನಗರದ 100 ಬೆಡ್ ಸರ್ಕಾರಿ ಆಸ್ಪತ್ರೆಗೆ ಇಂದು ಉಪಲೋಕಾಯುಕ್ತ ಬಿ. ವೀರಪ್ಪ ದಿಢೀರ್ ಭೇಟಿ ಕೊಟ್ಟಿದ್ದರು. ಈ ವೇಳೆ ಸರ್ಕಾರಿ ನೌಕರ ನಾಳೆಯ ಹಾಜರಾತಿಯನ್ನು ಇಂದೇ ಹಾಕಿ ಸಿಕ್ಕಿಬಿದ್ದಿದ್ದಾನೆ.
ಆಸ್ಪತ್ರೆ ಸ್ವಚ್ಛತೆ, ವೈದ್ಯರು, ನರ್ಸ್, ಡಿ ಗ್ರುಪ್ ನೌಕರರ ಹಾಜರಾತಿ ಪುಸ್ತಕ ಪರಿಶೀಲನೆ ವೇಳೆ ನಾಳೆ ಹಾಜರಾತಿಯನ್ನ ಅಡ್ವಾನ್ಸ್ ಆಗಿ ಇಂದೇ ಸಹಿ ಹಾಕಿರುವುದು ಬೆಳಕಿಗೆ ಬಂದಿದೆ. ಇದರಿಂದ ಗರಂ ಆದ ಉಪ ಲೋಕಾಯುಕ್ತರು ಈ ರೀತಿಯಾಗದಂತೆ ಕ್ರಮ ವಹಿಸುವಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ ತಾಖೀತು ಮಾಡಿದರು.