ಬೆಳಗಾವಿ : ನಾಡು, ನುಡಿ ವಿಚಾರದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಗಟ್ಟಿತನ ಪ್ರದರ್ಶಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷೆಯಲ್ಲಿ ದಾಖಲೆ ಕೊಡ್ತಿರೋ ಬಗ್ಗೆ ಆರೋಪ ವಿಚಾರವಾಗಿ ಮಾತನಾಡಿದ ಅವರು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಇದೆ.. ಇರುತ್ತೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಇರುತ್ತೆ. ಕೆಲ ದಿನಗಳ ಹಿಂದೆ ಭಾಷಾ ಅಲ್ಪಸಂಖ್ಯಾತ ಆಯೋಗದ ಆಯುಕ್ತರು ಬಂದಿದ್ದರು. ಆಗ ಬೇರೆ ಬೇರೆ ಸಂಘಟನೆ, ಸಂಸ್ಥೆಗಳು ತಮ್ಮ ತಮ್ಮ ಬೇಡಿಕೆ ಮನವಿ ಕೊಟ್ಟಿದ್ದರು. ಆಗ ಜಿಲ್ಲಾಡಳಿತದ ಗಮನಕ್ಕೂ ಈ ವಿಚಾರ ಬಂದಿದೆ. ಅವರ ಮನವಿಯನ್ನ ಜಿಲ್ಲಾಡಳಿತ ಕಾನೂನು ಅಭಿಪ್ರಾಯ ಪಡೆಯುತ್ತೇವೆ, ಆ ಬಳಿಕ ಜಿಲ್ಲಾಡಳಿತ ಸ್ಪಷ್ಟನೆ ಕೊಡುತ್ತೆ ಅಂತಾ ನೇರವಾಗಿ ಹೇಳಿದ್ದೇವೆ ಎಂದಿದ್ದಾರೆ.
ಪಾದಚಾರಿಗೆ ಕಾರು ಡಿಕ್ಕಿ, ಕಾಂಪೌಂಡ್ ಗೋಡೆಗೆ ಎಸೆದು ನೇತಾಡಿದ ಮಹಿಳೆ ; ವಿಡಿಯೋ ವೈರಲ್
ಈ ಭಾಗದಲ್ಲಿ ಮೊದಲಿಂದಲೂ ಸಮಸ್ಯೆ ಇರೋದ್ರಿಂದ ಗೊಂದಲ ಸೃಷ್ಟಿಯಾಗಿದೆ. ಯಾವುದೇ ರೀತಿಯ ಗೊಂದಲ ಇನ್ನುಮುಂದೆ ಸೃಷ್ಟಿ ಆಗಲ್ಲಾ. ಆ ನಿಟ್ಟಿನಲ್ಲಿ ನಮ್ಮ ತಳಮಟ್ಟದ ಅಧಿಕಾರಿಗಳಿಗೆ ಸೂಚನೆ, ಆದೇಶ ಕೊಡ್ತಿನಿಮೂಲ ದಾಖಲೆಗಳನ್ನ ನಾವು ಸ್ಕ್ಯಾನ್ ಮಾಡ್ತಿದ್ದೇವೆ. ಆಸ್ತಿ ಉತಾರಗಳನ್ನ ಡಿಜಿಟಲಿಕರಣ ಮಾಡ್ತಿದ್ದೇವೆ. ಕೆಳಹಂತದ ಅಧಿಕಾರಿಗಳಿಗೆ ಆಸ್ತಿ ದಾಖಲೆಗಳನ್ನ ತಂತ್ರಾಂಶದ ಮೂಲಕ ಕೊಡಲು ಸೂಚಿಸಿತ್ತೇನೆ. ಆಗ ಸೃಷ್ಟಿ ಆಗಿರೋ ಸಮಸ್ಯೆ ಅಂತ್ಯವಾಗಲಿದೆ ಎಂದು ನೇರವಾಗಿಯೇ ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಅಂತಾ ಹೇಳಿದ್ದಾರೆ.