ಉತ್ತರಪ್ರದೇಶ: ಉತ್ತರ ಪ್ರದೇಶದ ಸಂಭಾಲ್ನ ಕಾರ್ತಿಕೇಯ ಮಹಾದೇವ ದೇವಸ್ಥಾನದಲ್ಲಿ ಬರೋಬ್ಬರಿ 46 ವರ್ಷಗಳ ಬಳಿಕ ಹೋಳಿ ಹಬ್ಬವನ್ನು ಆಚರಿಸಲಾಗಿದೆ. ಹೌದು, ಸಂಭಾಲ್ನ ಖಗ್ಗು ಸೈರನಲ್ಲಿರುವ ಕಾರ್ತಿಕೇಯ ದೇವಸ್ಥಾನದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಹೋಳಿ ಹಬ್ಬ ಆಚರಿಸಲಾಗಿದೆ.
ಸಂಭಾಲ್ ಕೋಮು ಸೂಕ್ಷ್ಮ ವಿಚಾರಗಳಿಂದಲೇ ಪದೇ ಪದೇ ಸುದ್ದಿಯಾಗಿತ್ತು. 1978ರ ಗಲಭೆಯ ಬಳಿಕ ದೇವಸ್ಥಾನವನ್ನು ಮುಚ್ಚಲಾಗಿತ್ತು. ಇದೀಗ 46 ವರ್ಷಗಳ ಬಳಿಕ ಸೈರನಲ್ಲಿರುವ ಕಾರ್ತಿಕೇಯ ದೇಗುಲದ ಬಾಗಿಲನ್ನು ಓಪನ್ ಮಾಡಲಾಗಿದ್ದು, ಸಾಮಾಜಿಕ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದಲೇ ಹೋಳಿ ಹಬ್ಬವನ್ನು ಆಚರಿಸಿದ್ದಾರೆ.
Holi: ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಹೋಳಿ ಹಬ್ಬದ ಮಹತ್ವ ಗೊತ್ತಾ ನಿಮಗೆ..?
ಕಾರ್ತಿಕೇಯ ದೇಗುಲವು ಶಾಹಿ ಜಾಮ ಮಸೀದಿ ಬಳಿಯೇ ಇದೆ. 2024ರ ನ.24ರಂದು ನಾಲ್ಕು ಮಂದಿಯ ಸಾವಿಗೆ ಕಾರಣವಾದ ಕೋಮು ಹಿಂಸಾಚಾರದ ನಂತರ ವಿವಾದದ ಕೇಂದ್ರ ಬಿಂದುವಾಗಿತ್ತು.