IPL ಆರಂಭಕ್ಕೂ ಮುನ್ನವೇ ಮುಂಬೈಗೆ ಬಿಗ್ ಶಾಕ್ ಎದುರಾಗಿದೆ.ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ತಂಡದ ಭಾಗವಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲಿಜಾದ್ ವಿಲಿಯಮ್ಸ್ ಗಾಯದಿಂದಾಗಿ ಲೀಗ್ನಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಮುಂಬೈ ಇಂಡಿಯನ್ಸ್ ಮತ್ತೊಬ್ಬ ಸ್ಟಾರ್ ವೇಗಿಯನ್ನು ತಂಡಕ್ಕೆ ಸೇರಿಕೊಂಡಿದೆ
ದೊಡ್ಡಬಳ್ಳಾಪುರ: ಹೊಂಗೆ ಮರಕ್ಕೆ ನೇಣು ಬಿಗಿದು 15 ವರ್ಷದ ಬಾಲಕ ಸೂಸೈಡ್!
ಲಿಜಾದ್ ವಿಲಿಯಮ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಾಷ್ ಇದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 1 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, 86 ಟಿ20 ಪಂದ್ಯಗಳಲ್ಲಿ 59 ವಿಕೆಟ್ಗಳನ್ನು ಪಡೆದಿದ್ದಾರೆ. ಕಾರ್ಬಿನ್ ಈ ಹಿಂದೆ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ಆದರೆ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
ಏತನ್ಮಧ್ಯೆ, ಮುಂಬೈ ಮಾರ್ಚ್ 23 ರಂದು 18 ನೇ ಸೀಸನ್ನ ಮೊದಲ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆದ್ದರಿಂದ, ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.