ಲೋಕಸಭೆ ಅಧಿವೇಶನದಲ್ಲಿ ಸಂಸದ ಸಾಗರ ಖಂಡ್ರೆ ಸೋಯಾಬೀನ್ ಖರೀದಿ ವಿಚಾರವಾಗಿ ಸದನದ ಗಮನವನ್ನ ಸೆಳೆದರು.ಬೀದರ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಬೆಳೆ ಬೆಳೆಯುತ್ತಿರುವ ಬಗ್ಗೆ ಉಲ್ಲೇಖಿಸಿ, ಆದರ ಬೆಂಬಲ ಬೆಲೆ (MSP) ಅಡಿಯಲ್ಲಿ ಎಕರೆಗೆ ಕೇವಲ 5 ಕ್ವಿಂಟಲ್ನಂತೆ ಒಟ್ಟು 20 ಕ್ವಿಂಟಲ್ ಮಾತ್ರ ಖರೀದಿ ಮಾಡಲಾಗುತ್ತಿರುವುದರಿಂದ ಹೆಚ್ಚಿನ ರೈತರು ಬೆಂಬಲ ಬೆಲೆ ಲಾಭದಿಂದ ವಂಚಿತರಾಗುತ್ತಿದ್ದಾರೆ.
ಇದಲ್ಲದೆ, ಸೋಯಾಬೀನ್ ಖರೀದಿಗೆ ಕಡಿಮೆ ಸಮಯ ನೀಡುತ್ತಿರುವುದರಿಂದ ಹೆಚ್ಚಿನ ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಆಗದೆ, ಬೆಂಬಲ ಬೆಲೆ ಲಾಭದಿಂದ ವಂಚಿತರಾಗುತ್ತಿದ್ದಾರೆ.
ಬ್ಯಾಂಕ್ ಲಾಕರ್ʼಗಳಲ್ಲಿ ಚಿನ್ನವನ್ನು ಇಡುವುದು ಸುರಕ್ಷಿತವೇ? ನೀವು ಈ RBI ನಿಯಮಗಳ ಬಗ್ಗೆ ತಿಳಿದಿರಲೇಬೇಕು
ಈ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ರೈತರಿಂದ ಉತ್ಪಾದಿತ ಸೋಯಾಬೀನ್ ಅನ್ನು ಸಂಪೂರ್ಣವಾಗಿ ಖರೀದಿ ಮಾಡಬೇಕು ಮತ್ತು ಎಲ್ಲಾ ರೈತರಿಗೆ ಬೆಂಬಲ ಬೆಲೆ ಲಾಭ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಬೀದರ ಸಂಸದ ಸಾಗರ ಖಂಡ್ರೆ ಒತ್ತಾಯಿಸಿದರು. ಇದರೊಂದಿಗೆ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.