ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆಯಷ್ಟೇ ಬಾಕಿ ಇದೆ. ಇದೇ ತಿಂಗಳ 17ಕ್ಕೆ ಅಪ್ಪು 50ನೇ ಜನ್ಮೋತ್ಸವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಅಪ್ಪು ಅಜರಾಮರಾಗಿ ಇಡೋದಿಕ್ಕೆ ಪವರ್ ಪಡೆ ವಿಶೇಷವಾಗಿ ಅವರ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ. ಅಂತೆಯೇ ರಾಜರತ್ನನ ಅಭಿಮಾನಿಯಾಗಿರುವ ಅನಿಲ್ ಕುಮಾರ್ ಎಂಬುವವರು ಇದೇ ಅಪ್ಪು ಬರ್ತಡೇ ತಮ್ಮ ಅಂಗಡಿಗೆ ಭೇಟಿ ಕೊಡುವ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಚಾಟ್ಸ್ ನೀಡಲಿದ್ದಾರೆ.
ಸಿಲಿಕಾನ್ ಸಿಟಿಯ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ನವರು ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಫ್ರೀಯಾಗಿ ಮಸಾಲಪೂರಿ, ಪಾನಿಪೂರಿ ಸೇರಿದಂತೆ ಎಲ್ಲಾ ಬಗೆಯ ಚಾಟ್ಸ್ ಗಳನ್ನಿ ಮಾರ್ಚ್ 17 ರಂದು ಸಂಜೆ ಸಮಯದಲ್ಲಿ ನೀಡುತ್ತಾರೆ. ಪುನೀತ್ ರಾಜ್ಕುಮಾರ್ ಅವರ 50ನೇ ಹುಟ್ಟುಹಬ್ಬ ಪ್ರಯುಕ್ತ ಹಾಗೂ ಟೀಮ್ ಇಂಡಿಯಾ 2025ರ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿದ್ದಕ್ಕಾಗಿ ಮಸಾಲಪೂರಿ, ಪಾನಿಪೂರಿ ಉಚಿತವಾಗಿ ನೀಡಲಾಗುತ್ತದೆ. ಕಳೆದ ಎರಡು ಮೂರು ವರ್ಷಗಳಿಂದಲೂ ಅನಿಲ್ ಈ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಐವತ್ತನೇ ಉತ್ಸವಕ್ಕೆ ಅವರು ಅಭಿನಯದ ಚೊಚ್ಚಲ ಸಿನಿಮಾ ಅಪ್ಪು ರೀ ರಿಲೀಸ ಆಗುತ್ತಿದೆ. ನಾಳೆ ಮೂನ್ನೂರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಬುಕ್ ಮೈನಲ್ಲಿ ದಾಖಲೆಯ ಬುಕ್ಕಿಂಗ್ ಆಗಿದೆ.