ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಯಡವಟ್ಟಿನಿಂದ ಅನೇಕ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಧರ್ಮಾಧಾರಿತ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ಅವರು, ಸರ್ಕಾರಿ ಸಂಸ್ಥೆಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ರಾಜ್ಯದ ಜನರಿಗೆ ಕಾಂಗ್ರೆಸ್ ತೀವ್ರ ದ್ರೋಹ ಬಗೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿ-ತಪ್ಪಿಯೂ ಸೋಂಪು ಕಾಳನ್ನು ತಿನ್ನಬೇಡಿ..!
ಕೆಎಸ್ಆರ್ಟಿಸಿ, ಬಿಎಂಟಿಸಿ ನಷ್ಟದಲ್ಲಿರುವ ಬಗ್ಗೆ ಪ್ರತಿಕ್ರಯಿಸಿ, KSRTC ವೈಪರ್ ಹಾಕುವುದಕ್ಕೂ ಇವರ ಬಳಿ ದುಡ್ಡಿಲ್ಲ. ಸರ್ಕಾರಿ ಇಲಾಖೆಗಳ ವಿದ್ಯುತ್ ಬಿಲ್ ಪಾವತಿ ಮಾಡುತ್ತಿಲ್ಲ, ಅದಕ್ಕೂ ಹಣ ಇಲ್ಲ. ಸರ್ಕಾರಿ ಬಸ್ಗಳಿಗೆ ಡಿಸೇಲ್ ಹಾಕುವುದಕ್ಕೂ ದುಡ್ಡಿಲ್ಲ. ಶಾಲಾ ಮಕ್ಕಳ ಸಮಯಕ್ಕೆ ಸರಿಯಾದ ಬಸ್ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ರಾಜ್ಯದಲ್ಲಿ ಇಲ್ಲದ ಗ್ಯಾರಂಟಿ ಅನುಷ್ಠಾನ ಸಮಿತಿ ಕರ್ನಾಟಕದಲ್ಲಿ ಯಾಕೆ? ರಾಹುಲ್ ಗಾಂಧಿ ಅವರು ಗ್ಯಾರಂಟಿ ಸಮಿತಿ ಅನುದಾನದ ಬಗ್ಗೆ ಹೇಳಬೇಕು. ಇದು ರಾಜ್ಯದ ಜನರಿಗೆ ಬಗೆದಿರುವ ದ್ರೋಹ. ದೊಡ್ಡದಾಗಿ ಮಾತನಾಡುವ ರಾಹುಲ್ ಗಾಂಧಿ ಈಗ ಮಾತನಾಡಲಿ ಎಂದು ಜೋಶಿ ಸವಾಲು ಹಾಕಿದರು.