ಬೆಂಗಳೂರು:- ಒಂದೆಡೆ ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಜನತೆ ಕಂಗಾಲಾಗಿದ್ದರೆ, ಮತ್ತೊಂದೆಡೆ ಪ್ರಯಾಣಿಕರಿಗೆ ಬರೆ ಎಳೆದು BMRCL ಅದ್ದೂರಿ ಕಾರು ಬಾರು ನಡೆಸಿದೆ.
ಮುಸ್ಲಿಮರಿಗೆ ಇರುವ ಸೌಕರ್ಯ ನಮಗ್ಯಾಕಿಲ್ಲ: ಸಚಿವ ಜಮೀರ್ ವಿರುದ್ಧ ಮಹಿಳೆಯರ ಆಕ್ರೋಶ!
ನಮ್ಮ ಮೆಟ್ರೋ ದರ ಏರಿಕೆ ನಡುವೆ BMRCL ಅಧಿಕಾರಿಗಳು ಅದ್ದೂರಿ ಕಾರು ಬಾರು ನಡೆಸುತ್ತಿದ್ದು, ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಒಂದಡೆ ಪ್ರಯಾಣಿಕರಿಗೆ ಬರೆ ಇವರಿಗೆ ಐಷಾರಾಮಿ ಕಾರು ಬಾರು ಜೋರಾಗಿದೆ.
ನಮ್ಮ ಮೆಟ್ರೋ ಟಿಕೆಟ್ ದರ ಶೇ.100% ಏರಿಕೆ ಸಂದರ್ಭದಲ್ಲೇ BMRCL ಟೀಂ, ದುಬಾರಿ ಕಾರು ಖರೀದಿಸಿದೆ.
ಬಿಎಂಆರ್ ಸಿ ಎಲ್ ಅಧಿಕಾರಿಗಳು ಓಡಾಡಲು ಕೋಟ್ಯಾಂತರ ಮೌಲ್ಯದ ಹೈ ಎಂಡ್ ಕಾರುಗಳ ಖರೀದಿ ಮಾಡುತ್ತಿದ್ದು, ಬಿಎಂಆರ್ ಸಿ ಎಲ್ ನಿಂದ ಬರೋಬ್ಬರಿ 5 ಕೋಟಿ ರೂ ವೆಚ್ಚದಲ್ಲಿ ಕಾರು ಖರೀದಿ ಮಾಡಲಾಗಿದೆ. ಈ ಬಗ್ಗೆ BMRCL ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ. ಒಂದು ಕಾರಿಗೆ 40-45 ಲಕ್ಷ ತಗುಲಿದ್ದು, 10ಕ್ಕೂ ಹೆಚ್ಚು ಖಾರು ಖರೀದಿ ಆಗಿರೋ ಬಗ್ಗೆ ಪತ್ರ ಬರೆದಿದ್ದಾರೆ.
ಈ ಕಾರುಗಳು ಎಕ್ಸಿಕ್ಯುಟಿವ್ ಡೈರೆಕ್ಟರ್ ಹಾಗೂ ಫಂಕ್ಷನಲ್ ಡೈರೆಕ್ಟರ್ಸ್ ಗಳಿಗಾಗಿ ಕಾರುಗಳ ಖರೀದಿ ಮಾಡಿದೆ. BMRCL ಆರ್ಥಿಕ ನಷ್ಟದಲ್ಲಿ ಸಾಗ್ತಿದೆ. ಇದ್ರ ನಡುವೆ ಅನಗತ್ಯ ದುಂದುವೆಚ್ಚ ಬೇಕಿತ್ತ ಎಂದು ನೌಕರರ ಸಂಘ ಪ್ರಶ್ನಿಸಿದೆ.