ಬೆಂಗಳೂರು:- ರಾಜಧಾನಿ ಬೆಂಗಳೂರಿನ ಮಾರ್ಕೆಟ್ ರಸ್ತೆ ತಡೆ ನಡೆಸಿ ಜನರು ಪ್ರತಿಭಟನೆ ನಡೆಸಿ ಹೈಡ್ರಾಮ ಸೃಷ್ಟಿ ಮಾಡಿರುವ ಘಟನೆ ಜರುಗಿದೆ.
ಅಪ್ಪ-ಅಮ್ಮನನ್ನು ಚನ್ನಾಗಿ ನೋಡಿಕೊಳ್ಳದಿದ್ದರೆ ಸಿಗಲ್ಲ ಆಸ್ತಿ: ಕಂದಾಯ ಸಚಿವ!
ಮಾರ್ಕೆಟ್ ರಸ್ತೆ ಆನಂದಪುರದಲ್ಲಿ ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಜನರು, ಪ್ರತಿಭಟನೆ ನಡೆಸಿದರು. ಇಲ್ಲಿರುವ ಯಾವ ಮನೆಗು ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್ ನಲ್ಲಿ ಅಲ್ಲಲ್ಲಿ ಮೋಟರ್ ಕನೆಕ್ಷನ್ ನಿಡಲಾಗಿದೆ. ಮೋಟರ್ ಸ್ಟಾರ್ಟ್ ಮಾಡುವ ಕರೆಂಟ್ ತಗುಲಿ ಸಾವನ್ನಪ್ಪಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಇನ್ನೂ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆಗೆ ಜನರು ವಾಗ್ವಾದಕ್ಕಿಳಿದಿದ್ದಾರೆ. ನಮ್ಮ ಮನೆಗೆ ನೀರು ಸಿಗೊವರೆಗೆ ರಸ್ತೆ ತಡೆ ನಿಲ್ಲಿಸಲ್ಲ. ನೀರು ಹಿಡಿಯಲು ಹೋಗಿ ಒಂದು ಜೀವ ಹೋಗಿದೆ ಎಂದು ಆಕ್ರೋಶ ಹೊರ ಹಾಕಿದರು.