ಶಿವಮೊಗ್ಗ: ಹಿಂದೂ ಹುಡುಗಿಯರಿಗೆ ಧೈರ್ಯ ತಿಳಿಸಿ ಜಾಗೃತಿ ಮೂಡಿಸುವ ದೃಷ್ಠಿಯಿಂದ ಲವ್ ಜಿಹಾದ್ ಪುಸ್ತಕವನ್ನು ಬಿಡುಗಡೆಗೊಳಿಸಿದ್ದೇವೆ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು.
ಈ ಹಿಂದೆ ಫೆಬ್ರವರಿ 28 ರಂದು ನನ್ನನ್ನು ಶಿವಮೊಗ್ಗಕ್ಕೆ ಬಾರದಂತೆ ಪೊಲೀಸರು ತಡೆದರು. ಈ ಸಮಯದಲ್ಲಿ ನಮ್ಮ ಹಾಗೂ ಪೊಲೀಸರ ನಡುವೆ ಸ್ವಲ್ಪ ಮಟ್ಟಿಗೆ ವಾದ ವಿವಾದಳಾದವು. ಆ ಸಂದರ್ಭದಲ್ಲಿ ಭಜರಂಗದಳ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತರು. ಅಷ್ಟೇ ಅಲ್ಲದೆ ಎಂಎಲ್ಎ ಹಾಗೂ ಸಂಸದರು ನನಗೆ ಅವತ್ತು ಬೆಂಬಲ ನೀಡಿದರು ಅವರಿಗೆ ಧನ್ಯವಾದ ತಿಳಿಸುತ್ತೇನೆ.
ಈಗ ಪುಸ್ತಕ ಬಿಡುಗಡೆಗೆ ಕೋರ್ಟ್ನಲ್ಲಿ ಪುಸ್ತಕ ಬಿಡುಗಡೆಗೆ ನಮಗೆ ಅನುಮತಿ ಸಿಕ್ಕಿದೆ. ನಾವು ಈ ಪುಸ್ತಕ ಬಿಡುಗಡೆ ಗೊಳಿಸುತ್ತಿರುವ ಮುಖ್ಯ ಉದ್ದೇಶ ಸಮಾಜದಲ್ಲಿ ಹಿಂದೂ ಹುಡುಗಿಯರಿಗೆ ಧೈರ್ಯ ತಿಳಿಸಿ ಜಾಗೃತಿ ಮೂಡಿಸುವುದಾಗಿದೆ. ಈ ಹಿನ್ನಲೆ ಈಗಾಗಲೇ ಒಂದು ಲಕ್ಷ ಪುಸ್ತಕ ನಾವು ಹಂಚುತ್ತಿದ್ದೇವೆ. ಜನ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಇಸ್ಲಾಂ ಅನುಸರಿಸಿರುವ ಭಾಗವೇ ಲವ್ ಜಿಹಾದ್ ಎಂದರು.
ವಾರಕ್ಕೊಮ್ಮೆ ಒಂದು ಲೋಟ ಕಬ್ಬಿನ ರಸ ಕುಡಿದ್ರೆ ಸಾಕು ಈ ರೋಗಗಳಿಂದ ಶಾಶ್ವತ ಪರಿಹಾರ ಸಿಗುತ್ತೆ..!
ಲವ್ ಜಿಹಾದ್ ಎಂಬುವುದು ಇಸ್ಲಾಮೀಕರಣದ ಒಂದು ದೇಶದ್ರೋಹದ ತಂತ್ರವಾಗಿದೆ. ನಿಜವಾದ ಪ್ರೀತಿ ಇಲ್ಲದೆ ಹಿಂದೂ ಯುವತಿಯರನ್ನು ಮೋಸ ಮಾಡಿ ಪ್ರೀತಿಗೆ ಬೀಳಿಸುವ ವಿಧಾನವಿದು. ನಿಜವಾದ ಪ್ರೀತಿ ಆಗಿದ್ದರೆ ಯುವತಿಯರಿಗೆ ಯಾಕೇ ಬುರ್ಕಾ ಹಾಕಿಸುತ್ತಾರೆ. ಈ ಎಲ್ಲದರ ಬಗ್ಗೆ ನಾವು ಈ ಲವ್ ಜಿಹಾದ್ ಪುಸ್ತಕದಲ್ಲಿ ಆಧಾರ ಸಹಿತವಾಗಿ ಪ್ರಕಟಿಸಿದ್ದೇವೆ . ಹಿಂದೂ ಹೆಣ್ಣು ಮಕ್ಕಳ ರಕ್ಷಣೆಯ ಕೆಲಸವನ್ನು ನಾವು ಮಾಡುತ್ತಿದ್ದೇವೆ.2009 ರಲ್ಲಿ ಮೊದಲ ಪುಸ್ತಕ ಬಿಡುಗಡೆ ಮಾಡಿದ್ದೇವು ಈಗ ಎರಡನೇ ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ.
ಮೊದಲು ಪುಸ್ತಕ ಬಿಡುಗಡೆ ಮಾಡುವಾಗ ಮುತಾಲಿಕ್ ಗೆ ಮದುವೆ ಆಗಿಲ್ಲ ಹಾಗಾಗಿ ಪ್ರೀತಿ ಗೊತ್ತಿಲ್ಲ ಜಿಹಾದ್ ಅಂತಾನೇ ಅಂತ ಜನ ಎನೇನೋ ಹೇಳ್ತಿದ್ರು. ನಂತರ ಲವ್ ಜಿಹಾದ್ ಜಾಸ್ತಿಯಾಯಿತು. ಈಗ ಪ್ರಧಾನಮಂತ್ರಿಯವರು ಸಹ ಲವ್ ಜಿಹಾದ್ನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎನ್ನುತ್ತಾರೆ. ಎರಡು ವರ್ಷದಲ್ಲಿ ಸರಿಸುಮಾರು 13 ಲಕ್ಷ ಹುಡುಗಿಯರು ಲವ್ ಜಿಹಾದ್ ಸೇರಿದಂತೆ ಬೇರೆ ಪ್ರಕರಣದಲ್ಲಿ ಒಳಗಾಗಿದ್ದಾರೆ. ಈ ಹಿನ್ನಲೆ ನಾವು ಹೆಲ್ಪ್ ಲೈನ್ ಸಹ ಪ್ರಕಟಿಸಿದ್ದೇವೆ ಎಂದರು.
ನೂರು ಕಡೆಯಲ್ಲಿ ಮಹಿಳೆಯರಿಗೆ ತ್ರಿಶೂಲ ಧೀಕ್ಷೆ ನೀಡುವ ಕಾರ್ಯಕ್ರಮ ನಡೆಸುತ್ತೇವೆ ಮಹಿಳೆಯರು ದೈರ್ಯವಾಗಿ ಸಮಾಜದಲ್ಲಿ ಓಡಾಡಲು ನೂರು ಕಡೆಕಗಳಲ್ಲಿ ತ್ರಿಶೂಲ ಧೀಕ್ಷೆಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ಈಗಾಗಲೇ ಆರಂಭ ಗೊಂಡಿದೆ. ಇಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡಲು ನಾವು ಬಂದರೆ ನಮ್ಮನ್ನು ಶಿವಮೊಗ್ಗದ ಪೊಲೀಸರು ತಡೆಯುತ್ತಾರೆ.
ಮುತಾಲಿಕ್ ಏನು ರೇಪಿಸ್ಟ್ ಅಲ್ಲ, ದರೋಡೆಕೋರನಲ್ಲ ಆದರೂ ನನ್ನನ್ನು ತಡೆದಿದ್ದನ್ನು ನಾನು ವಿರೋಧಿಸುತ್ತೇನೆ. ನಾನೂ ಈಗಾಗಲೇ 4 ಜಿಲ್ಲೆಗಳಲ್ಲಿ ಈ ಪುಸ್ತಕವನ್ನು ಬಿಡುಗಡೆಗೊಳಿಸಿದ್ದೇನೆ ಅಲ್ಲೆಲ್ಲಿಯೂ ನನಗೆ ಈ ರೀತಿಯ ತಡೆಯನ್ನು ಒಡ್ಡಿರಲಿಲ್ಲ. ಆದರೂ ಡಿಸಿ ಹಾಗೂ ಎಸ್ಪಿಯವರು ಕಾಂಗ್ರೆಸ್ ಮಾತು ಕೇಳಿ ನನ್ನನ್ನು ಶಿವಮೊಗ್ಗಕ್ಕೆ ಭಾರದಂತೆ ತಡೆದರಾ ಎಂಬುದನ್ನು ಉತ್ತರಿಸಬೇಕು ಎಂದರು.