ಚಾಮರಾಜನಗರ: ಇಡೀ ರಾಜ್ಯದಲ್ಲಿ ಬೇಸಿಗೆಯ ಬಿರು ಬಿಸಿಲು ಭೂಮಿಯನ್ನು ಸುಡ್ತಾ ಇದ್ದು ಇದ್ದ ಬದ್ದ ಕೆರೆಗಳು ಬಣಗುಡ್ತಾ ಇದೆ. ಆದರೆ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದಲ್ಲಿ ಮಾತ್ರ ಕೆರೆಗಳು ಭಾಗಸ: ಭರ್ತಿಯಾಗಿದ್ದು ವನ್ಯಜೀವಿಗಳಿಗೆ ಸದ್ಯಕ್ಕೆ ನೀರಿನ ಆತಂಕ ದೂರಾದಂತಿದೆ. ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೆರೆಗಳು ಶೇ.70 ಎಷ್ಟು ಭರ್ತಿಯಾಗಿರುವ ಕಾರಣ ಇಲ್ಲಿನ ವನ್ಯ ಜೀವಿಗಳಿಗೆ ನೀರಿನ ಆತಂಕ ಇಲ್ಲವಾಗಿದೆ.
ಭರ್ತಿಯಾದ ಕೆರೆಗಳ ಸುತ್ತಾ ಪ್ರತಿ ನಿತ್ಯ ಧನಿವಾರಿಸಿಕೊಳ್ಲಲು ಆನೆ ಕಾಡೆಮ್ಮ ಹುಲಿ ಜಿಂಕೆಗಳು ದೌಡಾಯಿಸುತ್ತಿವೆ. ಬೇಸಿಗೆಯ ಬಿರು ಬೀಸಲು ಇಡೀ ಮನುಕುಲವನ್ನು ಈ ಭಾರೀ ಹೈರಾಣಾಗಿಸಿದೆ. ಅದರಲ್ಲಂತೂ ಈ ಬಾರಿಯ ಬೇಸಿಗೆಯ ಬಿಸಿಲು ದೀನೇದಿನೇ ಹೆಚ್ವಾಗ್ತಾ ಇದೆ.
ವಾರಕ್ಕೊಮ್ಮೆ ಒಂದು ಲೋಟ ಕಬ್ಬಿನ ರಸ ಕುಡಿದ್ರೆ ಸಾಕು ಈ ರೋಗಗಳಿಂದ ಶಾಶ್ವತ ಪರಿಹಾರ ಸಿಗುತ್ತೆ..!
ಬಿರು ಬಿಸಿಲು ಶಾಖಕ್ಕೆ ನಾಗರಹೊಳೆ ಅಭಯಾರಣ್ಯದ ಕೆರೆಗಳಲ್ಲಿ ನೀರಿನಲ್ಲದೆ ಪ್ರಾಣಿಗಳು ಪರಿತಪಿಸುತ್ತಿವೆ. ಹಾಗಾಗಿ ನಾಗರಹೊಳೆ ಸೇರಿದಂತೆ ಹಲವಾರು ಅರಣ್ಯದ ವ್ಯಾಪ್ತಿಗಳಲ್ಲಿ ಟ್ಯಾಂಕರ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಬಂಡೀಪುರ ಕೆರೆ, ಸೊಳ್ಳೇಕಟ್ಟೆ , ಎರೆಕಟ್ಟೆ, ಕ್ಯಾತಹಳ್ಳಿ ಕೆರೆ, ಕಡಮ್ಮತ್ತೂರು ಕಟ್ಟೆ, ಕಾಳಯ್ಯನಕಟ್ಡೆ , ಬೆಟ್ಟದಕಟ್ಟೆ, ತಾವರೆಕಟ್ಟೆ, ಸೋಮಯ್ಯನಕಟ್ಟೆ ಸೇರಿದಂತೆ ಬಹತೇಕ ಕೆರೆಗಳಲ್ಲಿಲ್ಲಿ ನೀರು ತುಂಬಿದೆ.
ಆದ್ರೆ ಬಂಡೀಪುರದಲ್ಲಿ ಮಾತ್ರ ಹಿಂಗಾರು ಮಳೆ ಉತ್ತಮವಾದ ಹಿನ್ನಲೆ ಹಾಗೂ ಕೆರೆಗಳ ಸಮೀಪ ಸೋಲಾರ್ ಪ್ಲಾಂಟ್ ನಿರ್ಮಿಸಿ ಕೆರೆಗಳಿಗೆ ನೀರು ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಭಾಗಶ: ಕೆರೆಗಳು ಭರ್ತಿಯಾಗಿದೆ ಸದ್ಯಕ್ಕೆ ನೀರಿನ ಕೊರತೆ ಇಲ್ಲ ಎಂದು ಬಂಡೀಪುರ ಸಿ.ಎಫ. ಪ್ರಭಾಕರ್ ತಿಳಿಸಿದ್ದಾರೆ.