ದೊಡ್ಡಬಳ್ಳಾಪುರ: ರಸ್ತೆಯಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ನಾಲ್ಕು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಓರ್ವ ವೃದ್ಧನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಅರಣ್ಯ ಇಲಾಖೆ ಕಚೇರಿ ಸಮೀಪ ಈ ಘಟನೆ ನಡೆದಿದೆ.
ಹೆಜ್ಜೇನು ದಾಳಿಯ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಇರುವುದರಿಂದ ಆಸ್ಪತ್ರೆಗೆ ಹೋಗಲು ರೋಗಿಗಳ ಪರದಾಟ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ. ವೃದ್ಧನನ್ನು ಬಿಟ್ಟೂ ಬಿಡದೆ ಕಚ್ಚಿದ ಜೇನು ಹುಳುಗಳು,
Black water: ಬ್ಲ್ಯಾಕ್ ವಾಟರ್ ಎಂದರೇನು..? ಸೆಲೆಬ್ರಿಟಿಗಳು ಯಾಕೆ ಇದನ್ನು ಜಾಸ್ತಿ ಕುಡಿಯುತ್ತಾರೆ ಗೊತ್ತಾ.?
ಈ ವೇಳೆ ಸ್ಥಳೀಯರು ನೆರವಿಗೆ ಬಂದು, ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು, ಪೇಪರಗಳಿಗೆ ಬೆಂಕಿಯಿಟ್ಟಿದ್ದಾರೆ. ಬೆಂಕಿ ಇಡುತ್ತಿದ್ದಂತೆ ಜೇನು ಹುಳುಗಳ ಕಾಟ ಕಡಿಮೆ ಆಗಿದೆ. ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.