ಬೀದರ್ : ಜಿಲ್ಲಾ ಆಸ್ಪತ್ರೆ ಬ್ರಿಮ್ಸ್ ಕೊಟ್ಯಾಂತರ ರೂಪಾಯಿ ಬಿಲ್ ಮತ್ತು ತೆರಿಗೆ ಬಾಕಿ ಉಳಿಸಿಕೊಂಡಿದೆ. ಬ್ರಿಮ್ಸ್ ಆಸ್ಪತ್ರೆ ಕಳೆದ ಸುಮಾರು ವರ್ಷಗಳಿಂದ ನೀರಿನ, ಆಸ್ತಿ ಬಿಲ್ ಪಾವತಿಸಿಲ್ಲ. 10 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ನೀರಿನ ಕರ 1.5 ಕೋಟಿ ರೂ. ಮತ್ತು ಆಸ್ತಿ ಕರ 8.5 ಕೋಟಿ ರೂ. ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬೀದರ್ ನಗರ ಸಭೆ ನೀರಿನ ಕರ, ಆಸ್ತಿ ಕರ ಪಾವತಿಸುವಂತೆ ಹತ್ತಾರು ನೋಟೀಸ್ ನೀಡಿದ್ದರೂ ಸಹಿತ ಬ್ರಿಮ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನೀರು ಸರಬರಾಜು ನಿಲ್ಲಿಸುತ್ತೇವೆ ಎಂದು ನಗರ ಸಭೆಯ ಆಯುಕ್ತರು ಎಚ್ಚರಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಣ ವಸೂಲಾತಿಯಾಗುತ್ತಿಲ್ಲ. ನಗರ ಸಭೆಗೆ ತನ್ನ ಆದಾಯ ಮೂಲವೇ ತೆರಿಗೆ ಹಣ, ಆದರೆ ಅದನ್ನೇ ವಸೂಲಿ ಮಾಡದೆ ಹಾಗೇ ಬಿಟ್ಟರೆ ನಗರದ ಅಭಿವೃದ್ಧಿಯಾದರೂ ಹೇಗೆ ಆಗುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ತೆರಿಗೆ ವಸೂಲಿ ಮಾಡಿದ್ದರೇ ಇಷ್ಟೊತ್ತಿಗಾಗಲೇ ತೆರಿಗೆ ಹಣ ನಗರಸಭೆಗೆ ಬರುತ್ತಿತ್ತು ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಸೂಲಾಗದೆ ಹಾಗೆ ಉಳಿದಿದೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೂ ಕೂಡಾ ಕಾರಣವಾಗಿದೆ.
ಬೇಸಿಗೆ ಆರಂಭದಲ್ಲಿ ಬ್ರಿಮ್ಸ್ಗೆ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ ನಗರಸಭೆ ಅಧಿಕಾರಿಗಳು ಹತ್ತು ಹಲವು ಬಾರಿ ನೋಟಿಸ್ ಮೂಲಕ ಸೂಚಿಸಿದ್ರು ಯಾರೊಬ್ಬ ಬ್ರೀಮ್ಸ ಅಧಿಕಾರಿ ಹಣ ಪಾವತಿ ಮಾಡುವ ಗೋಜಿಗೆ ಬಂದಿಲ್ಲ. ಪಾವತಿ ಮಾಡದ್ದಿದಲ್ಲಿ ನೀರು ಸರಬರಾಜು ನೀಲಿಸಲಾಗುವುದು ಎಂದು ನಗರ ಸಭೆ ಆಯುಕ್ತ ಶೀವರಾಜ ರಾಠೋಡ ಮಾಹಿತಿ ನೀಡಿದ್ದಾರೆ.