ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಹೊಸ ಗೆಟಪ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಪ್ಯಾರಿಸ್ ನಲ್ಲಿ ಗುಲಾಬಿ ಬಣ್ಣದ ಆಫ್ ಶೋಲ್ಡರ್ ಬಟ್ಟೆ ತೊಟ್ಟು ಫಳಫಳ ಮಿಂಚಿದ್ದಾರೆ. ಪ್ರಣಿತಾ ಸೌಂದರ್ಯ ನೋಡಿ ಎರಡು ಮಕ್ಕಳ ತಾಯಿ ಅಂತಾ ನಂಬೋದಿಕ್ಕೆ ಆಗ್ತಿಲ್ಲ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಪೊರ್ಕಿ ಸಿನಿಮಾದಲ್ಲಿ ದರ್ಶನ್ ತೂಗುದೀಪಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿ ಪ್ರಣಿತಾ ಸುಭಾಷ್ ನಂತರ ತೆಲುಗು, ತಮಿಳು, ಹಿಂದಿ, ಮಲಾಯಲಂ ಸಿನಿಮಾಗಳಲ್ಲೂ ನಟಿಗೂ ಅಲ್ಲೂ ಕೂಡ ಜನಪ್ರಿಯತೆ ಗಳಿಸಿದರು.
ಕನ್ನಡದಲ್ಲಿ ದರ್ಶನ್, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರರಂತಹ ದಿಗ್ಗಜರೊಂದಿಗೆ ನಟಿಸಿರುವ ಪ್ರಣಿತಾ, ತೆಲುಗಿನಲ್ಲಿ ಸಿದ್ಧಾರ್ಥ್, ಮಹೇಶ್ ಬಾಬು, ಎನ್ಟಿಆರ್, ಪವನ್ ಕಲ್ಯಾಣ್, ರಾಮ್ ಜೊತೆಯೂ ನಟಿಸಿದ್ದಾರೆ. ಪ್ರಣಿತಾ 2021ರಲ್ಲಿ ವೆಗಾ ಸಿಟಿ ಮಾಲ್ ಮಾಲೀಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾದ ನಿತಿನ್ ರಾಜು ಅವರನ್ನು ವಿವಾಹವಾದರು. ವಿವಾಹದ ಬಳಿಕ ಸಿನಿಮಾದಲ್ಲಿ ಪ್ರಣಿತಾ ಕಾಣಿಸಿಕೊಂಡಿದ್ದು ಕಡಿಮೆಯೇ. ಈ ವರ್ಷ ಪ್ರಣಿತಾ ನಟನೆಯ ಮಲಯಾಳಂ ಸಿನಿಮಾ ತಂಗಮಣಿ ಸಿನಿಮಾ ಹಾಗೂ ಕನ್ನಡದಲ್ಲಿ ರಾಮನ ಅವತಾರ ಸಿನಿಮಾ ಬಿಡುಗಡೆಯಾಗಿತ್ತು.