ಮಂಗಳೂರು:- ಲವ್ ಜಿಹಾದ್ಗೆ ಬಲಿಯಾಗಬೇಡಿ, ಅನ್ಯ ಧರ್ಮದ ಯುವತಿಯರನ್ನ ಪ್ರೀತಿಸಿ ಮದುವೆಯಾಗಿ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದ್ದ ಹೇಳಿಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟ ರಕ್ಷಿತ್! ಮಾರಿಯಮ್ಮನಿಗೆ ವಿಶೇಷ ಪೂಜೆ
ಇದೇ ವಿಚಾರವಾಗಿ ಮತ್ತೆ ಮಾತನಾಡಿದ ಸೂಲಿಬೆಲೆ, ನಿನ್ನೆಯ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ನಾವು ಲವ್ ಜಿಹಾದ್ಗೆ ಬಲಿಯಾಗಬೇಡಿ ಅಂತಾ ಹೇಳಿ ಹೇಳಿ ಸಾಕಾಯಿತು. ಲವ್ ಜಿಹಾದ್ ಅಂದರೆ ಅವರು ಪ್ರೀತಿ ಅಂತಾರೆ. ಅದಕ್ಕೆ ನಾನು ನೀವು ಕೂಡ ಪ್ರೀತಿ ಮಾಡಿ ಮದುವೆ ಆಗಿ ಅಂತಾ ಹೇಳಿದ್ದೇನೆ ಎಂದಿದ್ದಾರೆ.
ನಾವು ಕೇಸರಿ ಜಿಹಾದ್ ಮಾಡುತ್ತೀವೆ ಅಂತಾ ಹೇಳುವುದಕ್ಕೆ ಆಗಲ್ಲ. ಹಿಂದು ಧರ್ಮದಲ್ಲಿ ಜಿಹಾದ್ ಅನ್ನವುದೇ ಇಲ್ಲ. ಡಿವೈಎಫ್ಐ ಹಾಗೂ ಎಸ್ಡಿಪಿಐ ನಂತಹ ಪಕ್ಷಗಳು ಇದನ್ನು ವಿರೋಧಿಸಿದೆ ಎಂದರು.
ವಿದೇಶದಲ್ಲಿ ಮತಾಂತರ ನಿಷೇಧ ಕಾನೂನನ್ನು ಬಹುಸಂಖ್ಯಾತರು ವಿರೋಧಿಸುತ್ತಾರೆ. ಭಾರತದಲ್ಲಿ ಅಲ್ಪಸಂಖ್ಯಾತರೇ ಇದನ್ನು ವಿರೋಧಿಸುತ್ತಿದ್ದಾರೆ. ಎಸ್ಡಿಪಿಐನಿಂದ ಬೆದರಿಕೆ ಹೊಸದಲ್ಲ. ಎನ್ಆರ್ಸಿ, ಸಿಎಎ ವೇಳೆ ನನ್ನ ಮೇಲೆ ದಾಳಿಗೆ ಮುಂದಾಗಿದ್ದರು ಎಂದು ಹೇಳಿದ್ದಾರೆ.