ಉಡುಪಿ:- ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇಂದು ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿ ಮಾರಿಯಮ್ಮನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಇಂದು ಮಧ್ಯಾಹ್ನ ‘X’ ನಲ್ಲಿ ಸರ್ವರ್ ಸಮಸ್ಯೆ: ಭಾರತ ಸೇರಿ ಜಾಗತಿಕ ಮಟ್ಟದಲ್ಲಿ ಕೈಕೊಟ್ಟ ಸಾಮಾಜಿಕ ಮಾಧ್ಯಮ!
ಇತ್ತೀಚೆಗೆ ಕಾಪು ಮಾರಿಗುಡಿಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಸೂರ್ಯ ಕುಮಾರ್ ಯಾದವ್, ಪೂಜಾ ಹೆಗ್ಡೆ ಸೇರಿದಂತೆ ಅನೇಕರು ಭೇಟಿ ನೀಡಿದ್ದರು. ಅದರಂತೆ ಇಂದುತಾಯಿ ಜೊತೆ ಕಾಪು ಹೊಸ ಮಾರಿಗುಡಿಗೆ ರಕ್ಷಿತ್ ಭೇಟಿ ನೀಡಿದ್ದಾರೆ. ಈ ವೇಳೆ, ರಕ್ಷಿತ್ ಶೆಟ್ಟಿಗೆ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.
ಅಂದಹಾಗೆ, ರಕ್ಷಿತ್ ‘ರಿಚರ್ಡ್ ಆ್ಯಂಟನಿ’ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ನಿರ್ಮಾಣದತ್ತ ಕೂಡ ನಟ ಬ್ಯುಸಿಯಾಗಿದ್ದಾರೆ.