ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಬೇಟೆಗಿಳಿದಿದ್ದಾರೆ. ಅತಾರ್ಥ್ ಜೈಲರ್-2 ಸಿನಿಮಾದ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಇಂದಿನಿಂದ ಜೈಲರ್ ಭಾಗ-2 ಚಿತ್ರೀಕರಣ ಶುರುವಾಗಿದೆ ಎಂದು ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಅಪ್ ಡೇಟ್ ಕೊಟ್ಟಿದೆ. ʼಜೈಲರ್’ ಸಿನಿಮಾ 2023ರಲ್ಲಿ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಕಂಡಿತ್ತು. ಈಗ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದ್ದು, ಸಹಜವಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
https://x.com/sunpictures/status/1898969609702723638
ನೆಲ್ಸನ್ ಸಾರಥ್ಯದಲ್ಲಿ ಮೂಡಿಬಂದಿದ್ದ ಜೈಲರ್ ನಲ್ಲಿ ತಲೈವರ್ ಮಾಸ್ ಅವತಾರ ಅಬ್ಬರಿಸಿದ್ದರು. ʼಮುತ್ತುವೇಲ್ ಪಾಂಡಿಯನ್ʼ ಆಗಿ ಮೋಡಿ ಮಾಡಿದ್ದರು. ಕರುನಾಡ ಚಕ್ರವರ್ತಿ ಶಿವಣ್ಣ ನರಸಿಂಹನಾಗಿ ಪಾತ್ರದಲ್ಲಿ ಘರ್ಜಿಸಿ ತಮಿಳುನಾಡು ಸಿನಿಮಂದಿಯ ಹೃದಯಗೆದ್ದಿದ್ದರು. ಮೋಹನ್ ಲಾಲ್ ಕೂಡ ಚಿತ್ರಕ್ಕೆ ಸಾಥ್ ಕೊಟ್ಟಿದ್ದು, ಅನಿರುದ್ಧ್ ಸಂಗೀತ ಚಿತ್ರಪ್ರೇಮಿಗಳಿಗೆ ಕಿಕ್ ಕೊಟ್ಟಿತ್ತು.
ಈಗಾಗಲೇ ರಿಲೀಸ್ ಆಗಿರುವ ಜೈಲರ್-2 ಟೀಸರ್ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಜೈಲರ್ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ತಂಡ ಕೂಡ ಸೀಕ್ವೆಲ್ ನಲ್ಲಿ ದುಡಿತ್ತಿದೆ. ಶಿವಣ್ಣ ಕೂಡ ಜೈಲರ್-2ನಲ್ಲಿ ಬಣ್ಣ ಹಚ್ಚುವುದು ಅಧಿಕೃತವಾಗಿದೆ. ನರಸಿಂಹನಾಗಿ ಕಣ್ಣಲ್ಲೇ ಎದುರುಸಿದ್ದ ಕರುನಾಡ ಕಿಂಗ್ ಸೀಕ್ವೆಲ್ ನಲ್ಲಿ ಯಾವ ರೀತಿ ಧಮಾಲ್ ಮಾಡಲಿದ್ದಾರೆ ಎಂಬ ಕ್ಯೂರಿಯಾಸಿಟಿ ಸಿನಿಮಾಪ್ರೇಮಿಗಳಲ್ಲಿದೆ.