ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಅಮೃತ ೨ ಯೋಜನೆ 44 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡಿತಾ ಇದೆ ಇದಕ್ಕೆ ಯಾವುದೇ ದೂರ ದೃಷ್ಟಿಯಾಗಲಿ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದೆ ರಬಕವಿ ನಗರದ ಪ್ರಮುಖ ವಾರ್ಡುಗಳಲ್ಲಿ ರಸ್ತೆಗಳನ್ನು ಅಗಿದು ಪಾಯಪಣ್ಣ ಅಳವಡಿಸುತ್ತಿದ್ದಾರೆ ಕೂಡಲೇ ನಗರಸಭಾ ಪೌರಾಯುಕ್ತರು ಎಚ್ಚೆತ್ತುಗೊಂಡು
ಈ ಕಾಮಗಾರಿಯನ್ನು ತ್ವರಿತವಾಗಿ ನಿಲ್ಲಿಸಬೇಕು ಇಲ್ಲ ಅಂದ್ರೆ 44 ಕೋಟಿ ರೂಪಾಯಿ ಪೋಲ್ ಆಗೋದ್ರಲ್ಲಿ ಸಂದೇಹವೇ ಇಲ್ಲ ಎಂದು ರಬಕವಿ ಬನಹಟ್ಟಿ ನಗರಸಭೆಯ ಸ್ಥಾಯಿ ಸಮಿತಿ ಛೇರ್ಮನ್ನರು ಅರುಣ ಬುದ್ಧಿ ಮತ್ತು ಸದಸ್ಯ ಯಲ್ಲಪ್ಪ ಕಟ್ಟಿಗಿ ಮನವಿ ಸಲ್ಲಿಸಿದ್ದಾರೆ.ಬನಹಟ್ಟಿ ನಗರದಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ ೨ 24*7 ಕುಡಿಯುವ ನೀರು ಯೋಜನೆ ಸಂಪೂರ್ಣ ವಿಫಲವಾಗಿದೆ 30 ಕೋಟಿ ರೂಪಾಯಿ ಹಣವು ನೀರಿನಲ್ಲಿ ಹೋಮ ಕಳೆದಂತಾಗಿದೆ
ಕೂಡಲೇ ನಗರಸಭಾ ಅಧಿಕಾರಿಗಳು ಎಚ್ಚೆತ್ತುಗೊಂಡು ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣ ಪೋಲಾಗದಂತೆ ನೋಡಿ ತ್ವರಿತವಾಗಿ ಕಾಮಗಾರಿಯನ್ನು ಸ್ಥಗಿತ ಮಾಡಬೇಕೆಂದು ಆಗ್ರಹಿಸಿದರು.
ನಗರಸಭಾ ಸದಸ್ಯ ಯಲ್ಲಪ್ಪ ಕಟ್ಟಿಗಿ ಮಾತನಾಡಿ ನಮ್ಮ ಸದಸ್ಯರಿಗೆ ಮಾಹಿತಿ ನೀಡದೆ ಮಣಬಂದಂತೆ ರಬಕವಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ ಮುತ್ತು ಸಾರ್ವಜನಿಕರಿಂದ ಸಂಗ್ರಹವಾದ ಹಣ ಯಾವುದೇ ಕಾರಣಕ್ಕೂ ಹಣ ಪೋಲ್ ಆಗಬಾರದು ಮತ್ತು ಸಂಪೂರ್ಣವಾಗಿ ಮಾಹಿತಿ ಇಲ್ಲದೆ ಕಾಮಗಾರಿಯನ್ನ ಮಾಡ್ತಾ ಇರೋದು ಬೇಸರ ಸಂಗತಿ ಕೂಡಲೇ ರಬಕವಿ ನಗರದಲ್ಲಿ 44 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಕಾಮಗಾರಿ ಯೋಜನೆ ಕಾಮಗಾರಿಯನ್ನ ಕೂಡಲೇ ಸ್ಥಗಿತ ಮಾಡಬೇಕೆಂದು ಆಗ್ರಹಿಸಿದರು.
ನಗರಸಭಾ ಸ್ಥಾಯಿ ಸಮಿತಿ ಛೇರ್ಮನ್ನರು ಅರುಣ ಬುದ್ಧಿ ಮಾತನಾಡಿ ಅಮೃತ ೨ ಕುಡಿಯುವ ನೀರು ಯೋಜನೆಯು ಬನಹಟ್ಟಿಯಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ರಬಕವಿ ನಗರದಲ್ಲಿ 44 ಕೋಟಿ ವೆಚ್ಚದಲ್ಲಿ ನಡೆತಕ್ಕಂಥ ಕಾಮಗಾರಿ ಇದರಿಂದ ಜನರಿಗೆ ಯಾವುದೇ ರೀತಿ ಉಪಯೋಗ ಆಗುವುದಿಲ್ಲ ದಯವಿಟ್ಟು ಹಣ ಪೋಲಾಗದಂತೆ ನೋಡಿ ತ್ವರಿತವಾಗಿ ಕಾಮಗಾರಿನ ಸ್ಥಗಿತ ಮಾಡಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಮಾರುತಿ ಗಾಡಿವಡ್ಡರ ಮಾತನಾಡಿ ನಮ್ಮ ನಗರಸಭೆಯಿಂದ ಈಗಾಗಲೇ ಅಳವಡಿಸಿದ್ದ ನೀರಿನ ಮೇನ್ ಲೈನ್ ಪೈಪ್ ಎಂಟು ಇಂಚು ಇದೆ ಆದರೆ ಇವರು 44 ಕೋಟಿ ರೂಪಾಯಿ ವೆಚ್ಚದಲ್ಲಿ ಕೇವಲ 2 ಇಂಚಿನ ಪೈಪ್ ಹಾಕಿ ಕಾಮಗಾರಿಯನ್ನ ಮಾಡುತ್ತಿದ್ದಾರೆ ಇದರಿಂದ ಸಂಪೂರ್ಣವಾಗಿ 44 ಕೋಟಿ ರೂಪಾಯಿ ಹಾಳಾಗುತ್ತದೆ ದಯವಿಟ್ಟು ನಗರಸಭಾ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ