2025ರ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾವು ಗೆದ್ದು ಬೀಗಿದೆ.
ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ನಿವೃತ್ತಿ ಬಗ್ಗೆ ರೋಹಿತ್ ಹೇಳಿದ್ದೇನು?
ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ 2.24 ಮಿಲಿಯನ್ ಡಾಲರ್ ನಗದು ಬಹುಮಾನ ಪಡೆದಿದೆ. ರನ್ನರ್-ಅಪ್ ಆಗಿರುವ ನ್ಯೂಜಿಲೆಂಡ್ 1.12 ದಶಲಕ್ಷ ಡಾಲರ್ (9.75 ಕೋಟಿರೂ.) ಪಡೆದಿದೆ. ಈ ಬಾರಿ ಟೂರ್ನಿಯ ಒಟ್ಟು ನಗದು ಬಹುಮಾನ ಮೊತ್ತ 6.9 ದಶಲಕ್ಷ ಡಾಲರ್ಗೆ (60 ಕೋಟಿ ರೂ.) ಏರಿಕೆಯಾಗಿತ್ತು. 2017ಕ್ಕೆ ಹೋಲಿಸಿದರೆ ಒಟ್ಟು ನಗದು ಬಹುಮಾನದ ಮೊತ್ತವನ್ನು 53% ಏರಿಕೆ ಮಾಡಲಾಗಿತ್ತು.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಗೆಲುವು ಸಾಧಿಸಿತು. ಸಂಘಟಿತ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದೊಂದಿಗೆ 2000 ಇಸವಿಯಲ್ಲಿ ಕಿವೀಸ್ ವಿರುದ್ಧ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು.