ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕಾಡಂಚಿನಲ್ಲಿರುವ ಇಂಡಿಗನತ್ತ ಗ್ರಾಮದಲ್ಲಿ ರಸ್ತೇನೂ ಇಲ್ಲ ಸಾರಿಗೆ ವ್ಯವಸ್ಥೆನೂ ಇಲ್ಕದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕನಿಷ್ಟ ಸಾರಿಗೆ ವ್ಯವಸ್ಥೆಯೂ ಇಲ್ಲದೆ ರೋಗಿಗಳನ್ನು ಆಸ್ಪತ್ರೆಗೆ ರವಾನಿಸಲು ಗ್ರಾಮಸ್ಥರು ಡೋಲಿ ಮೊರೆ ಹೋದಂತಹ ಘಟನೆ ಜರುಗಿದೆ.
ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಸಲನತ್ತ ಗ್ರಾಮದ 80 ವರ್ಷದ ದುಂಡಮ್ಮ ಎಂಬುವವರು ಇಂಡಿಗನತ್ತ ಗ್ರಾಮದ ವಾಸವಾಗಿರುವ ಹಿರಿಯ ಪುತ್ರ ಮಾದೇಗೌಡ ರವರ ಮನೆಯಲ್ಲಿ ವಾಸವಿದ್ದು. ದಿಡೀರ್ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆ ಗ್ರಾಮಸ್ಥರ ನೆರವಿನಿಂದ ಡೋಲಿಯ ಮುಖಾಂತರ ಮಲೆಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಚಿಕಿತ್ಸೆ ಪಡೆದ ದುಂಡಮ್ಮ ಪಡಸಲನತ್ತ ಗ್ರಾಮದಲ್ಲಿರುವ ಕಿರಿಯ ಪುತ್ರ ಪುಟ್ಟಸ್ವಾಮಿಗೌಡರ ಮನೆಗೆ ತೆರಳಿದ್ದಾರೆ.
ವೈಜ್ಞಾನಿಕವಾಗಿ ದೇಶ ಮುಂದಿದೆ ಎನ್ನುವ ಇಂತಹ ಕಾಲಘಟ್ಟದಲ್ಲೂ ಕೂಡ ಇಲ್ಲಿನ ಜನರ ಪಾಡು ಹೇಳತೀರದಾಗಿದೆ. ಇಲ್ಲಿನ ನಿವಾಸಿಗಳ ಆರೋಗ್ಯ ಏರುಪೇರಾದ್ರೆ ಹತ್ತಾರು ಕಿಲೋಮೀಟರ್ ಡೋಲಿ ಸಹಾಯದಿಂದ ಪ್ರಾಣಿಗಳನ್ನು ಹೊತ್ತುವಂತೆ ರೋಗಿಗಳನ್ನು ಸಾಗಿಸಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಇಂತಹ ಅವ್ಯವಸ್ಥೆಯನ್ನು ಮೊದಲು ಸರಿಪಡಿಸಿ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು ಎನ್ನುವುದು ಇಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ