ಕೋಲಾರ: ಕಳೆಪೆ ಕೇಕ್ ಸೇವಿಸಿದ ಪರಿಣಾಮ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿರುವ ಘಟನೆ ಕೋಲಾರದ ಕೆ ಜಿ ಎಪ್ ನಲ್ಲಿ ನಡೆದಿದೆ. ಸದ್ಯ ಕೇಕ್ ನ್ನು ಖರೀದಿಸಿದ್ದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು , ನಗರಸಭೆ ಅಧಿಕಾರಿ ಗಳು ಬೇಕರಿಗೆ ಭೇಟಿ ನೀಡಿ ಬೇಕರಿಯನ್ನು ಜಪ್ತಿ ಮಾಡಿ ಬೀಗ ಜಡಿದಿದ್ದಾರೆ.
ಅಂಗನವಾಡಿ ಅಹಾರ ಅಕ್ರಮದ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಹೇಳಿದ್ದೇನು..?
ಕೆಜಿಎಫ್ ನಗರದ ರಾಬರ್ಟನ್ ಪೇಟೆಯ ಅಜಿತೇಷ್ ಕಳೆದ ನಾಲ್ಕರಂದು ‘ಸ್ಟೆಪ್ ಬೇಕ್’ ಬೇಕರಿಯಲ್ಲಿ ಕೇಕ್ ಖರೀದಿಸಿದ್ದರು. ಕೇಕ್ ತಿಂದು ನಾಲ್ವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದನ್ನು ಬೇಕರಿಯವರ ಗಮನಕ್ಕೆ ತಂದರೆ ಉಡಾಫೆ ಉತ್ತರ ನೀಡಿದ್ದರು. ಸದ್ಯ ನಗರಸಭೆ ಆರೋಗ್ಯಾಧಿಕಾರಿ ಬೇಕರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ನಿಷೇಧಿತವಾಗಿರುವ ಸಿಂಥೆಟಿಕ್ ಕಲರ್ ನ್ನು ಬಳಸುವುದು ಕಂಡು ಬಂದಿದೆ. ಅಷ್ಟೆ ಅಲ್ಲದೆ ಬೇಕರಿಯಲ್ಲಿ ಸ್ವಚ್ಚತೆಯೂ ಇಲ್ಲದಿರುವುದನ್ನು ಕಂಡ ಅಧಿಕಾರಿಗಳು ಬೇಕರಿಗೆ ಬೀಗ ಜಡೆದಿದ್ದಾರೆ. ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗಿದ್ದಾರೆ.