ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ನಾಳೆ ನಡೆಯಲಿದೆ.
ಮೆಟ್ರೋ ಪ್ರಯಾಣಿಕರೇ ನಾಳೆ ಈ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ!
ಪ್ರಶಸ್ತಿ ಪಂದ್ಯವು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯವಾಗಿ ಫೈನಲ್ಗೆ ಲಗ್ಗೆ ಇಟ್ಟಿರುವ ಭಾರತ ಫೈನಲ್ನಲ್ಲೂ ಗೆದ್ದು ಪ್ರಶಸ್ತಿ ಮುಡಿಗೇರಿಸಿ ಕೊಳ್ಳಬೇಕು ಎಂಬ ದೃಢಸಂಕಲ್ಪ ತೊಟ್ಟಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿರುವ ಕಿವೀಸ್ ತಂಡ, ಚಾಂಪಿಯನ್ಸ್ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ.
ಚಾಂಪಿಯನ್ಸ್ ಟ್ರೋಫಿಯ ಫೈನಲ್ಗೂ ಮುನ್ನ ಭಾರತ ತಂಡವು ಲೀಗ್ನಲ್ಲಿ ಅಜೇಯವಾಗಿತ್ತು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಲೀಗ್ನಲ್ಲಿ ಗೆದ್ದಿದ್ದ ಭಾರತ ಸೆಮಿಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೀಗ ಫೈನಲ್ನಲ್ಲಿ ಕಿವೀಸ್ ಎದುರಿಸಲು ಸಜ್ಜಾಗಿದೆ. ಅತ್ತ ನ್ಯೂಜಿಲೆಂಡ್ ಲೀಗ್ನಲ್ಲಿ ಬಾಂಗ್ಲಾದೇಶ, ಪಾಕಿಸ್ತಾನವನ್ನು ಮಣಿಸಿತ್ತು. ಸೆಮೀಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಭಾರತವು ದುಬೈನ ಒಂದೇ ಪಿಚ್ನಲ್ಲಿ ಆಡುವ ಮೂಲಕ ಲಾಭ ಪಡೆಯುತ್ತಿದೆ ಎಂಬ ಆರೋಪಗಳನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಹೋರಾಟ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.
ಲೀಗ್ ಹಂತದಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದಿದ್ದ ದುಬೈ ಪಿಚ್ನಲ್ಲೇ ಇದೀಗ ಇಂಡೋ-ಕಿವೀಸ್ ಫೈನಲ್ ನಡೆಯಲಿದೆ. ಈ ಪಿಚ್ನಲ್ಲಿ ಪಾಕ್ ವಿರುದ್ಧ ರೋಹಿತ್ ಪಡೆ 6 ವಿಕಟ್ಗಳ ಪ್ರಬಲ ಗೆಲುವು ಸಾಧಿಸಿತ್ತು. ಅವತ್ತು ಸ್ಪಿನ್ ಮತ್ತು ವೇಗ ಎರಡಕ್ಕೂ ನೆರವಾಗಿತ್ತು. ಕುಲ್ದೀಪ್ ಯಾದವ್ 40ಕ್ಕೆ 3, ಹಾರ್ದಿಕ್ 31ಕ್ಕೆ 2 ವಿಕೆಟ್ ಪಡೆದಿದ್ದರು. ಇದು ಪಾಕಿಸ್ತಾನ ತಂಡವನ್ನು 241 ರನ್ಗಳಿಗೆ ಆಲೌಟ್ ಆಗುವಂತೆ ಮಾಡಿತ್ತು. ಜತೆಗೆ ಬ್ಯಾಟರ್ಗಳು ರನ್ ಗಳಿಸಲು ಸಹಾಯ ಮಾಡುತ್ತದೆ. ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಜೇಯ 100 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ದುಬೈನ ಈ ಪಿಚ್ ಹೆಚ್ಚು ನಿಧಾನವಾಗಿದೆ.
ಆದರೆ ಭಾರತೀಯ ಆಟಗಾರರ ಮಿಶ್ರ ಫಾರ್ಮ್ ನ್ಯೂಜಿಲೆಂಡ್ ವೇಗದ ಬೌಲರ್ಗಳಿಗೆ ಹೆಚ್ಚಿನ ಲಾಭವಾಗಬಹುದು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಉಭಯ ತಂಡಗಳ ಕಳೆದ ಮುಖಾಮುಖಿಯಲ್ಲಿ ಕೊಹ್ಲಿ ಬೇಗನೇ ಔಟಾಗಿದ್ದರು. ಅಯ್ಯರ್, ಮಿಂಚಿದ್ದರು. ಅದಕ್ಕೂ ಹಿಂದಿನ ಮುಖಾಮುಖಿಗಳಲ್ಲೂ ಅಯ್ಯರ್ ಕಿವೀಸ್ ವಿರುದ್ಧ ಅಬ್ಬರಿಸಿದ್ದಾರೆ. ಆದರೆ, ಕಿವೀಸ್ ವೇಗದ ಬೌಲರ್ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಮ್ಯಾಟ್ ಹೆನ್ರಿ, ವಿಲ್ ಒ’ರೂರ್ಕ್, ಕೈಲ್ ಜೆಮಿಸನ್ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.