ಬೆಂಗಳೂರು:- ಮಾರ್ಚ್ 14ರಂದು ಹಲವು ಭಾಗದಲ್ಲಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 2025 ಆರಂಭದಿಂದಲೂ ಇಲ್ಲಿವರೆಗೂ ಹಲವೆಡೆ ಶಾಲಾ-ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ. ಈಗಾಗಲೇ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ರಜೆ ಪಡೆದಿದ್ದ ಶಾಲಾ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಮ್ಮೆ ಸಿಹಿ ಸುದ್ದಿ ಸಿಕ್ಕಿದೆ,
ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ ಮಾರ್ಚ್ 14ರ ಶುಕ್ರವಾರ, ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ಬಣ್ಣದ ಹಬ್ಬವನ್ನು ಹಿಂದೂಗಳು ಮತ್ತು ಇತರ ಧರ್ಮದ ಜನರು ಕೂಡ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಆದ್ದರಿಂದ ಸರ್ಕಾರ ಹೋಳಿ ಹಬ್ಬದ ದಿನ ರಜೆ ಘೋಷಳೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಹೋಳಿ ಹಬ್ಬದ ಸಮಯದಲಲ್ಲು ಕೆಲ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ. ಆದರೆ, ತೆಲಂಗಾಣ ಸರ್ಕಾರ ಈ ಹಬ್ಬವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ ಎಂದು ತಿಳಿದುಬಂದಿದೆ. ಹೋಳಿ ಹಬ್ಬದ ಮರುದಿನ ಶನಿವಾರ ಆಗಿರುವ ಹಿನ್ನೆಲೆ ಅರ್ಧ ದಿನವಷ್ಟೇ ತರಗತಿಗಳು ನಡೆಯಲಿವೆ. ಅಥವಾ ಕೆಲವೊಂದು ಶಿಕ್ಷಣ ಸಂಸ್ಥೆಗಳು ಐಚ್ಛಿಕವಾಗಿ ಆ ದಿನವೂ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ.
ನಂತರ ಭಾನುವಾರ ಇರುವ ಕಾರಣ ಎಲ್ಲಾ ಶಾಲಾ-ಕಾಲೇಜುಗಳಿಗೆ ಮೂರು ದಿನ ಸತತ ರಜೆಗಳು ಸಿಕ್ಕಾಂತಾಗಲಿವೆ. ಅಲ್ಲದೆ, ಶಾಲೆಗಳ ಜೊತೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಸಹ ಹೋಳಿ ರಜೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗೆ ಕೆಲವು ಹಬ್ಬಗಳ ಸಮಯದಲ್ಲಿ ರಜೆ ಘೋಷಣೆ ಮಾಡುವುದು ಆಯಾ ರಾಜ್ಯ ಸರ್ಕಾರದ ಮೇಲೆ ನಿರ್ಧಾರ ಆಗಿರುತ್ತದೆ. ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲೂ ಸಹ ಈ ದಿನದಂದು ಹೋಳಿ ಹಬ್ಬ ಆಚರಣೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಇದು ಹಿಂದಿಗಿಂದಲೂ ನಡೆದುಕೊಂಡು ಬಂದಿದೆ.
ಯಾಕೆಂದ್ರೆ ಈ ದಿನ ಬಣ್ಣದ ಹೋಕುಳಿಯಲ್ಲಿ ಮಿಂದೆಳ್ಳಲು ಯುವಕರು ಕಾತರದಲ್ಲಿರುತ್ತಾರೆ. ಅಲ್ಲದೆ, ಯುವತಿಯರು ಕೂಡ ಪಾಲ್ಗೊಳ್ಳುವುದುನ್ನು ನಾವು ನೋಡಿರುತ್ತೇವೆ. ಯಾವುದೇ ಅನಾಹುತಗಳು ಸಂಭವಿಸದಂತೆ ಅವರಿಗೆ ಪ್ರತ್ಯೇಕ ಸರ್ಕಲ್ ಅನ್ನು ಮಾಡಿ ಹೋಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಅದರಲ್ಲೂ ದೇಶದ ಮುಂಬೈ ಬಿಟ್ಟರೆ ಕರ್ನಾಟಕದ ದಾವಣಗೆರೆ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.