ಮೊಳಕಾಲ್ಮುರು:-ಚಲಿಸುತ್ತಿದ್ದಾಗಲೇ ಖಾಸಗಿ ಬಸ್ನ ಟಯರ್ ಕಳಚಿದ್ದು, ಸಂಭವನೀಯ ದೊಡ್ಡ ಪ್ರಮಾದ ತಪ್ಪಿದ ಘಟನೆ ಶನಿವಾರದಂದು ಸೂಲೇನಹಳ್ಳಿ ಬಳಿ ನಡೆದಿದೆ.
IND Vs PAK: ಕ್ಷಮಿಸಿ ನಾನು ಆ ರೀತಿ ವರ್ತಿಸಬಾರದಿತ್ತು: ಟೀಮ್ ಇಂಡಿಯಾ ಬಳಿ ಕ್ಷಮೆ ಕೋರಿದ ಪಾಕ್ ಸ್ಪಿನ್ನರ್!
ಮೊಳಕಾಲ್ಮುರು ಕಡೇ ಹೋಗುತ್ತಿದ್ದ ಖಾಸಗಿ ಬಸ್ ನ ಮುಂಭಾಗದ ಎಡಬದಿಯ ಟೈಯರ್ ಏಕಾಏಕಿ ಕಳಚಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ,ಚಾಲಕನ ಸಮಯಪ್ರಜ್ಞೆಯಿಂದ ಸುಮಾರು ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಬಸ್ ನ ಎಡಭಾಗದ ಟೈಯರ್ ಏಕಾಏಕಿ ಕಳಿಚಿದ ಪರಿಣಾಮ ಬಸ್ ಒಂದೆಡೆ ವಾಲಿದೆ,ಚಾಲಕ ನಿಧಾನವಾಗಿ ಬಸ್ ಅನ್ನು ನಿಯಂತ್ರಿಸಿದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ, ಇನ್ನು ಇದೇ ವೇಳೆ ರಸ್ತೆಯಲ್ಲಿ ಆಟೋ ಹತ್ತಲು ನಿಂತಿದ್ದ ಮಹಿಳೆಗೆ ಕಳಚಿ ಬಿದ್ದ ಟಯರ್ ತಗುಲಿ ಒಳಪೆಟ್ಟಾಗಿದ್ದು ಮಹಿಳೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.ಮೊಳಕಾಲ್ಮುರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.