ಈರುಳ್ಳಿ ತಿನ್ನುವುದರಿಂದ ನಾನಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅದರಲ್ಲೂ ಸುಂದರವಾದ ಮತ್ತು ಉದ್ದನೆಯ ಕೂದಲಿಗೆ ಹಾಗೂ ಮೊಡವೆ ಮುಕ್ತ ತ್ವಚೆಯನ್ನು ಪಡೆಯಲು ಈರುಳ್ಳಿ ಸಾಕಷ್ಟು ಸಹಕಾರಿ ಆಗಿದೆ ಎಂಬ ವಿಚಾರ ಅನೇಕ ಮಂದಿಗೆ ತಿಳಿದಿಲ್ಲ. ಆದರೆ ಈರುಳ್ಳಿ ಸೇವನೆಯಿಂದ ಪಡೆಯುವ ಲಾಭ ಒಂದೆರಡಲ್ಲ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
Kiara Advani: ಪ್ರೆಗ್ನೆಂಟ್ ಆದ ಬಳಿಕ ಈ ಸಿನಿಮಾಗಳಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ!?
ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ಬಳಸದೇ ಬಿಟ್ಟರೆ ಅಥವಾ ಅವುಗಳನ್ನು ಫ್ರಿಡ್ಜ್ನಲ್ಲಿ ಇರಿಸಿದರೆ, ಅನೇಕ ರೀತಿಯ ಸೂಕ್ಷ್ಮಜೀವಿಗಳು ಅವುಗಳನ್ನು ಪ್ರವೇಶಿಸುತ್ತವೆ. ಇದು ನಿಮ್ಮ ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಇಂತಹ ಸೂಕ್ಷ್ಮಜೀವಿಗಳು ದೇಹವನ್ನು ಅತಿಯಾಗಿ ಪ್ರವೇಶಿಸಿದರೆ, ಇದು ಕ್ಯಾನ್ಸರ್ ಅಪಾಯವನ್ನು ಉಂಟು ಮಾಡಬಹುದು.
ಕತ್ತರಿಸಿದ ಈರುಳ್ಳಿ ಸೂಕ್ಷ್ಮಜೀವಿಗಳ ನೆಲೆಯಾಗಿರುತ್ತದೆ: ಇನ್ನೂ ಈ ಬಗ್ಗೆ ನವದೆಹಲಿಯ ಸರ್ ಗಂಗಾ ರಾಮ್ ಕೋಲ್ಮೆಟ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಮಾನ್ಸಿ ಯಾದವ್ ಮಾತನಾಡಿ, ಈರುಳ್ಳಿಯನ್ನು ಫ್ರಿಡ್ಜ್ನಲ್ಲಿ ದೀರ್ಘಕಾಲ ಇಟ್ಟರೆ ಬ್ಯಾಕ್ಟೀರಿಯಾಗಳು ಒಳಗೆ ಹೋಗಬಹುದು. ಈರುಳ್ಳಿಯಲ್ಲಿರುವ ಗಂಧಕವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ ಕತ್ತರಿಸಿದ ಈರುಳ್ಳಿಯನ್ನು ಫ್ರಿಡ್ಜ್ನಲ್ಲಿ ದೀರ್ಘಕಾಲ ಇಟ್ಟರೆ, ಈರುಳ್ಳಿಯಲ್ಲಿರುವ ಸಲ್ಫರ್ ಅಂಶ ಹಾಳಾಗುತ್ತದೆ.
ಇದಲ್ಲದೇ, ಈರುಳ್ಳಿಯಲ್ಲಿರುವ ಇತರ ಪೋಷಕಾಂಶಗಳು ಸಹ ಕಡಿಮೆಯಾಗುತ್ತವೆ. ತಾಪಮಾನ ಕಡಿಮೆಯಾದಾಗ, ಸೂಕ್ಷ್ಮಜೀವಿಗಳು ಬೆಳೆಯುವ ಅವಕಾಶ ಹೆಚ್ಚಾಗಿರುತ್ತದೆ. ಇದಲ್ಲದೇ, ಶಿಲೀಂಧ್ರಗಳು ಬೆಳೆಯುತ್ತವೆ ಮತ್ತು ವಿವಿಧ ರೀತಿಯ ಸೂಕ್ಷ್ಮಜೀವಿಗಳು ಈರುಳ್ಳಿಯಲ್ಲಿ ಮನೆ ಮಾಡುತ್ತದೆ.
ಇಂತಹ ಈರುಳ್ಳಿಗಳನ್ನು ನೀವು ತಿಂದರೆ, ನಿಮಗೆ ಅನೇಕ ರೀತಿಯ ಹೊಟ್ಟೆಯ ಸಮಸ್ಯೆಗಳು ಬರಲು ಪ್ರಾರಂಭವಾಗುತ್ತದೆ. ಅಲ್ಲದೇ, ಇಂತಹ ಈರುಳ್ಳಿಯನ್ನು ಬೇಯಿಸಿದರೆ ಆಹಾರ ಕೂಡ ವಿಷಕಾರಿಯಾಗುತ್ತದೆ.
ಕ್ಯಾನ್ಸರ್ ಅಪಾಯ: ಹೊಟ್ಟೆಯಲ್ಲಿ ಶಿಲೀಂಧ್ರ ಸೋಂಕು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಇವುಗಳಲ್ಲಿ ಅತಿಸಾರ, ಹೊಟ್ಟೆ ನೋವು, ವಾಂತಿ ಮತ್ತು ವಾಕರಿಕೆ ಕೂಡ ಸೇರಿವೆ. ದೀರ್ಘಕಾಲ ಫ್ರಿಡ್ಜ್ ನಲ್ಲಿಟ್ಟ ಈರುಳ್ಳಿ ತಿನ್ನುವುದರಿಂದ ದೇಹದ ಎಲ್ಲಾ ಭಾಗಗಳಿಗೆ ಹಾನಿ ಉಂಟಾಗುತ್ತದೆ.
ಫ್ರಿಡ್ಜ್ ನಲ್ಲಿ ಇಟ್ಟಿರುವ ತುಂಬಾ ಹಳೆಯ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬರುತ್ತವೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಶಿಲೀಂಧ್ರ ಸೋಂಕಿನಿಂದಾಗಿ, ಜೀವಕೋಶಗಳಲ್ಲಿ ಉರಿಯೂತ ಹೆಚ್ಚಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇವೆಲ್ಲವೂ ಒಟ್ಟಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹಾಗಾದರೆ ಕತ್ತರಿಸಿಟ್ಟ ಈರುಳ್ಳಿಯನ್ನು ಏನು ಮಾಡಬೇಕು?: ಯಾವುದೇ ಆಹಾರ ಪದಾರ್ಥವನ್ನಾಗಿ ಫ್ರಿಡ್ಜ್ನಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ತೆರೆದಿಡಬಾರದು. 24 ಗಂಟೆಗಳವರೆಗೂ ಫ್ರಿಡ್ಜ್ನಲ್ಲಿಟ್ಟ ಆಹಾರವನ್ನು ನೀವು ಸೇವಿಸಿದರೆ, ಇದು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
ಈರುಳ್ಳಿ ಮಾತ್ರವಲ್ಲದೇ ಬೇರೆ ಯಾವುದೇ ಕತ್ತರಿಸಿದ ತರಕಾರಿಗಳನ್ನು ಹೆಚ್ಚು ಹೊತ್ತು ಫ್ರಿಡ್ಜ್ನಲ್ಲಿ ಇಡಬೇಡಿ. ಏಕೆಂದರೆ ಹಲವು ರೀತಿಯ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೇ, ಈ ಆಹಾರಗಳಲ್ಲಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಆದ್ದರಿಂದ, ರೆಫ್ರಿಜರೇಟರ್ನಲ್ಲಿ ಇರಿಸಲಾಗಿರುವ ವಸ್ತುಗಳನ್ನು 24 ಗಂಟೆಗಳ ಒಳಗೆ ಬಳಸಿ.