ಕಲಬುರಗಿ : ಸಿದ್ದರಾಮಯ್ಯನವರು ಒಳ್ಳೆಯ ಬಜೆಟ್ ಮಂಡಿಸಿದ್ದಾರೆ. ದೇಶದಲ್ಲಿ ಯಾರದ್ರು 16 ಬಜೆಟ್ ಮಂಡಿಸಿದ್ದಾರೆ ಅಂದ್ರೆ ಅದು ಸಿದ್ದರಾಮಯ್ಯ ಎಂದು ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ದಾರೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ.
ಇಂದು ಕಲಬುರಗಿಯ ಜೇವರ್ಗಿಯಲ್ಲಿ ಏರ್ಪಡಿಸಿದ್ದ ಕಲ್ಯಾಣ ಪಥ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಖರ್ಗೆ ಅವರು, ಸಿಎಂ ಸಿದ್ದರಾಮಯ್ಯ ಅವರನ್ನ ಮಾತ್ರವಲ್ಲದೇ ವೇದಿಕೆಯಲ್ಲಿದ್ದ ಡಿಸಿಎಂ ಡಿಕೆಶಿವಕುಮಾರ್ ಅವರನ್ನೂ ಸಹ ಹೊಗಳಿದ್ರು. ಡಿಕೆಶಿ ಕೂಡ ಪಕ್ಷ, ಸಂಘಟನೆ ಅಂತ ಒಳ್ಳೆಯ ಕೆಲಸ ಮಾಡಿದ್ದಾರೆ ಹೀಗೆ ಇಬ್ಬರು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಅದಕ್ಕಾಗಿ ನೀವು ಇಬ್ಬರು ಒಗ್ಗಟ್ಟಾಗಿ ಮುಂದೆ ಹೋಗಿ ಅಭಿವೃದ್ಧಿ ಬಿಟ್ಟು ಬೇರೆ ಏನನ್ನೂ ಮಾತನಾಡಬೇಡಿ. ಬೇರೆ ಮಾತನಾಡಿದ್ರೆ ಜನ ಕೂಡ ನಮ್ಮನ್ನ ಒಪ್ಪಲ್ಲ ಅಂದ್ರು. ಸಿಎಂ ಸಿದ್ದು & ಡಿಕೆಶಿ ಒಟ್ಟಿಗೆ ಹೋದ್ರೆ ಕೆಲಸ ಆಗುತ್ತೆ ಅಂತ ಕೈ ಸನ್ನೆ ಮಾಡಿ ಡಿಕೆಶಿ ಕಡೆಗೆ ತೋರಿಸಿದ್ರು. ಒಂದು ವೇಳೆ ನೀವು ವಿರುದ್ದ ಹೊದ್ರೆ ನಮಗೆ ಕಷ್ಟ ಅಂತಾನೂ ಹೇಳಿದರು. ಈ ಮೂಲಕ ಇಬ್ಬರು ನಾಯಕರಿಗೂ ಸಹ ಹೊಂದಾಣಿಕೆಯ ಕಿವಿಮಾತು ಹೇಳಿದ್ದಾರೆ.