ಬೆಂಗಳೂರು: ಖಾಸಗಿ ಕಂಪನಿಯವರ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಸಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜೆ.ಪಿ ನಗರ 7th ಪೇಸ್ ನಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ನಂದೀಶ್ ರನ್ನು ಇತ್ತೀಚೆಗೆ ದೇವನಹಳ್ಳಿಗೆ ಟ್ರಾನ್ಸಫರ್ ಮಾಡಿದ್ರು.
ಇದೇ ವಿಚಾರಕ್ಕೆ ಕಂಪನಿಯವ್ರು ಹಾಗೂ ವ್ಯಕ್ತಿಯ ಮಧ್ಯೆ ಮಾತುಕತೆ ಆಗ್ತಿತ್ತು. ಈ ತಿಂಗಳ ಸ್ಯಾಲರಿ ಕೂಡ ಕೊಡದೆ ಕೆಲಸ ಮಾಡಿಸಿಕೊಳ್ತಿದ್ದ ಆರೋಪ ಕೂಡ ಕೇಳಿಬಂದಿದ್ದು, ಇಂದು ಕಚೇರಿಯ ಕಟ್ಟದಿಂದ ಬಿದ್ದು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ.
Gold Loans: ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ: ಟಾಪ್ 5 ಬ್ಯಾಂಕ್ʼಗಳು ಯಾವುವು ಗೊತ್ತಾ..?
ಸದ್ಯ ಕಾಲಿಗೆ ಗಾಯವಾಗಿ, ಬೆನ್ನಿನ ಮೂಳೆ ಮುರಿದಿದೆ ಎನ್ನಲಾಗ್ತಿದೆ. ಸ್ಥಳೀಯ ಆಸ್ಪತ್ರೆಗೆ ನಂದಿಶ್ ರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿದ್ದಾರೆ.