ಕೋಲಾರ : ಕೋಲಾರಕ್ಕೆ ಈ ಬಾರಿ ಬಂಪರ್ ಬಜೆಟ್ ನೀಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರ ಜಿಲ್ಲೆಯ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಸಾರ್ವಜನಿಕ ಸಹಭಾಗಿತ್ವದಲ್ಲಿ ಆರಂಭವಾಗಲಿದೆ. 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 3190 ಕೋಟಿ ಮೊತ್ತದ ದೇವನಹಳ್ಳಿಯಿಂದ ತಮಿಳುನಾಡು ಗಡಿಯವರೆಗೆ124ಕಿ.ಮೀ ಅಭಿವೃದ್ದಿ ಮಾಡಲಾಗುತ್ತಿದೆ.
ಸರ್ಕಾರಿ ಜಮೀನಿನ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವಿಗೆ ಸೂಚಿಸಿದ ಶಾಸಕರು
ಕೆಜಿಎಫ್ ನಲ್ಲಿ 40 ಕೋಟಿ ವೆಚ್ಚದಲ್ಲಿ ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪನೆ, ರೈತರ ಆಧುನಿಕ ಮಾರುಕಟ್ಟೆ, ನರಸಾಪುರದಲ್ಲಿ 173 ಕೋಟಿ ರೂ. ಮಹಿಳಾ ವಾಸತಿ ನಿಲಯ, ಮಾಲೂರು ಶಿವಾರ ಪಟ್ಟಣದಲ್ಲಿ ಮಲ್ಟಿ ನೆಟ್ ಜಿರೋ ಕೈಗಾರಿಕಾ ಪಾರ್ಕ, ಕೋಲಾರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬಜೆಟ್ ನಲ್ಲಿ ಅನುಮೋದನೆ ಸಿಕ್ಕಿದೆ, ಜೊತೆಗೆ ಪ್ರತಿ ಕ್ಷೇತ್ರಕ್ಕೆ 232 ಕೋಟಿ ರೂಪಾಯಿ ಗ್ಯಾರಂಟಿ ಮೂಲಕ ಜನರಿಗೆ ಸೇರುತ್ತಿದೆ,ಎಲ್ಲಾ ಸಮುದಾಯಗಳಿಗೂ ಬಜೆಟ್ ನಲ್ಲಿ ನ್ಯಾಯ ಒದಗಿಸಿದೆ ಎಂದಿದ್ದಾರೆ. ಇನನ್ನೂ ಸುದ್ದಿಗೋಷ್ಟಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್,ಶಾಸಕ ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ,ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಉಪಸ್ಥಿತರಿದ್ದರು.