ಬೀದರ್: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಂತೋಷ್ ಮೇತ್ರೆ ಹಾಗೂ ಸಾಕ್ಷ್ಯ ನಾಶ ಮಾಡಿದ ಬ್ರಿಮ್ಸ್ ಕಾಲೇಜಿನ ಪ್ರೊಪೆಸರ್ ಹಾಗೂ ವೈದ್ಯ ವೈಜಿನಾಥ್ ಬಿರಾದಾರ್ಗೆ ಬೀದರ್ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯವು ಶಿಕ್ಷೆ ವಿಧಿಸಿ ಆದೇಶಿಸಿದೆ.
ಔರಾದ್ ತಾಲುಕಿನ ಸಂತಪೂರ್ ಠಾಣೆಯಲ್ಲಿ ದಾಖಲಾದ ಪೊಕ್ಸೋ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾದೀಶ ಸಚಿನ್ ಕೌಶಿಕ್ ಆರೋಪಿ ಸಂತೋಷ್ ಮೇತ್ರೆಗೆ 1 ಲಕ್ಷ ದಂಡ ಹಾಗೂ ಜೀವಾವಧಿ ಶಿಕ್ಷೆ ಹಾಗೂ ಸಾಕ್ಷ್ಯ ನಾಶ ಮಾಡಿದ ವೈದ್ಯ ವೈಜ್ಯನಾಥ್ ಬಿರಾದಾರ್ಗೆ 20 ಸಾವಿರ ದಂಡ ಹಾಗೂ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಬಾಲಕಿಗೆ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿದ್ದ ಆರೋಪಿ ಸಂತೋಷ್ ಬಾಲಕಿಗೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿ ಬಾಲಕಿಯನ್ನ ಗರ್ಭಿಣಿ ಮಾಡಿದ್ದನು. ಬಳಿಕ ಬಾಲಕಿಯ ತಾಯಿಯ ಜೊತೆಗೆ ಬೀದರ್ ನಗರದ ಖಾಸಗ ಆಸ್ಪತ್ರೆಯಲ್ಲಿ ವೈದ್ಯ ವೈಜಿನಾಥ್ ಬಿರಾದಾರರಿಂದ ಗರ್ಭಪಾತ ಮಾಡಿಸಿದ್ದನು. ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಕುರಿತು ಮಾಹಿತಿ ನೀಡದೇ ಗರ್ಭಪಾತ ಮಾಡಿದ್ದಕ್ಕೆ ವೈದ್ಯನಿಗೆ ಶಿಕ್ಷೆ ವಿಧಿಶಿ ಆದೇಶಿದಿದ್ದಾರೆ. ಇನ್ನು ಸಂತ್ರಸ್ತ ಬಾಲಕಿಗೆ ಒಂದು ಲಕ್ಷ ಪರಿಹಾರದ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.