ಸಿನಿಮಾಗಳಲ್ಲಿ ಖಾನ್ಗಳ ಪಾರುಪತ್ಯವೇ ಮುಂದುವರಿದಿದೆ ನಟಿ ಖುಷ್ಬೂ ಸುಂದರ್ ಬೇಸರ ಹೊರ ಹಾಕಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೋಲಿಸಿದರೆ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುತ್ತವೆ. ಹೀರೋಗಳ ಆರಾಧನೆ ಇಲ್ಲಿ ಹೆಚ್ಚು. ಇದು ಬದಲಾಗಬೇಕು ಎಂಬುದು ಖುಷ್ಬೂ ಸುಂದರ್ ಅಭಿಪ್ರಾಯ. ಇದು ಬದಲಾಗಲು ಸಾಕಷ್ಟು ಸಮಯ ಬೇಕಿದೆ ಎಂಬ ಅಭಿಪ್ರಾಯವನ್ನು ಅವರು ಹೊರಹಾಕಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾಗಳು ಹಿಟ್ ಆಗಲು ಅವಕಾಶವಿಲ್ಲ. ಕಾಲ ಬದಲಾಗಿದೆ ಎಂದು ಹೇಳಲು ನಾನು ಸಿದ್ಧನಿಲ್ಲ. ನಾವು ವಿಚಾರಗಳನ್ನು ಒಪ್ಪಿಕೊಲ್ಳಬೇಕು. ‘ಅರಮನೈ 4’, ‘ಮೂಗುತ್ತಿ ಅಮ್ಮ 2’ ರೀತಿಯ ಮಹಿಳಾ ಪ್ರಧಾನ ಸಿನಿಮಾಗಳು ಎಲ್ಲೋ ಅಪರೂಪಕ್ಕೊಮ್ಮೆ ಬರುತ್ತವೆ’ ಎಂದು ಅವರು ಹೇಳಿದ್ದಾರೆ.
ಬೆಳ್ಳಿಪರದೆ ಅನ್ನೋದು ಖಾನ್, ಸೂಪರ್ಸ್ಟಾರ್ಗಳದ್ದು. ನಾವು ಇನ್ನೂ ಸಾಕಷ್ಟು ಕಾಯಬೇಕಿದೆ’ ಎಂದು ಖುಷ್ಬೂ ಹೇಳಿದ್ದಾರೆ. ಈ ಮೂಲಕ ಮಹಿಳಾ ಪ್ರಧಾನ ಸಿನಿಮಾಗಳು ರಿಲೀಸ್ ಆಗಿ ಸೂಪರ್ ಹಿಟ್ ಆಗಲು ಇನ್ನೂ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.